ರಾಜ್ಯದ ಸಮಸ್ತ ಸರ್ಕಾರಿ ಅನುದಾನಿತ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕಿಯರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಕಾರ್ಯಕರ್ತೆಯರು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
“ನೆನಗುದಿಗೆ ಬಿದ್ದಿರುವ ಪಿಎಸ್‌ಟಿ ಶಿಕ್ಷಕರ ಭರ್ತಿ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕು. ಹಳೆಯ ಪಿಂಚಣಿಯ ವ್ಯವಸ್ಥೆಯನ್ನು ಕೂಡಲೇ ಜಾರಿ ಮಾಡಬೇಕು. ನಲಿ ಕಲಿ ಬೋಧನಾ ವ್ಯವಸ್ಥೆಯನ್ನು ಒಂದು ಮತ್ತು ಎರಡನೇ ತರಗತಿಗೆ ಬೋಧನಾ ವ್ಯವಸ್ಥೆಗೆ ಮಾತ್ರ ಸೀಮಿತಗೊಳಿ, ಮೂರನೇ ತರಗತಿಯನ್ನು ಪ್ರತ್ಯೇಕ ಬೋಧನೆಗೆ ಒಳಪಡಿಸಬೇಕು” ಎಂದು ಮನವಿ ಮಾಡಿದರು.
“ಭಾರತದ ಪ್ರಪ್ರಥಮ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ʼಶಿಕ್ಷಕಿಯರ ದಿನಾಚರಣೆʼಯೆಂದು ಶಾಲೆ-ಕಾಲೇಜುಗಳಲ್ಲಿ ಆಚರಿಸುವುದನ್ನು ಕಡ್ಡಾಯ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಎನ್‌ಇಪಿ ವಿರುದ್ಧ ಹೋರಾಟ ಮುಂದುವರೆಯಲಿ: ಕೆ ದೊರೈರಾಜು
ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಎಸ್ ಮುಳ್ಳೂರು, ಜಿಲ್ಲಾಧ್ಯಕ್ಷೆ ಛಾಯಾದೇವಿ ಕೋಳೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಶಾಂತಪ್ಪ, ಧನಲಕ್ಷ್ಮಿ ಸೇರಿದಂತೆ ಇತರರು ಇದ್ದರು.