ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕೆಲಸದ ಸಮಯದಲ್ಲಿ ದೈಹಿಕ ಸಮಸ್ಯೆ ಉಂಟಾದರೆ ಪೂರ್ವ ಚಿಕಿತ್ಸೆಗಾಗಿ ಸಿಡಬ್ಲ್ಯೂಎಫ್ಐ ಸಂಘಟನೆಯ ವತಿಯಿಂದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಮೆಡಿಕಲ್ ಕಿಟ್ ವಿತರಣೆ ಮಾಡಲಾಯಿತು.
ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಸಿದ್ದರಾಮೇಶ್ವರ ಮಠದಲ್ಲಿ ಕಾರ್ಮಿಕರಿಗೆ ಕೆಲಸದ ಸಮಯದಲ್ಲಿ ಸಣ್ಣ ಪುಟ್ಟ ಗಾಯಗಳು , ಪೆಟ್ಟಾಗುವುದು ಸಹಜ ಅದನ್ನು ಹೇಗೆ ನಿರ್ವಹಣೆ ಮಾಡುವುದು ಎಂದು ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ, ಸಿಡಬ್ಲ್ಯೂಎಫ್ಐ ತಾಲೂಕು ಪ್ರಧಾನ ಕಾರ್ಯದರ್ಶಿ ನಿಂಗಪ್ಪ, ಕಟ್ಟಡ ಕಾರ್ಮಿಕರು ಬೆವರ ಸುರಿಸಿ ಶ್ರಮಪಟ್ಟು , ಕೆಲಸ ಕಾರ್ಯಗಳು ನಿರ್ವಹಿಸುತ್ತಾರೆ. ಕೆಲಸದ ಸಮಯದಲ್ಲಿ ಏಕಾಏಕಿ ಆರೋಗ್ಯ ಸಮಸ್ಯೆ ಬಂದರೆ ಗಾಬರಿಯಾಗಬಾರದು. ಅದಕ್ಕೆ ಪೂರಕವಾಗಿ ಮೆಡಿಕಲ್ ಕಟ್‌ಗಳನ್ನು ನೀಡಲಾಗಿದೆ. ಹೆಚ್ಚಿನ ಕಾರ್ಮಿಕರು ಅವಿದ್ಯಾವಂತರಾಗಿರುತ್ತಾರೆ. ಮನೆಗಳು ಕಟ್ಟುವಾಗ, ಭಾರವಾದ ಕಲ್ಲುಗಳನ್ನು ಎತ್ತುವಾಗ ಗಾಯಗಳು ಆಗುತ್ತವೆ. ಅದನ್ನು ನಿವಾರಿಸುವುದು ಹೇಗೆ ಅನ್ನುವುದಕ್ಕೆ ಜಾಗೃತಿ ಮೂಡಿಸಲಾಗುತ್ತಿದ ಎಂದರು.
ಕಾರ್ಮಿಕ ಕಲ್ಯಾಣ ಮಂಡಳಿಯ ನಿರೀಕ್ಷಕರಾದ ಆದಾ ಶಾಂತಮೂರ್ತಿ, ಮೌನೇಶ್, ನರಸಿಂಹಲು ಈ ಮೆಡಿಕಲ್ ಕಿಟ್‌ಗಳನ್ನು ಕಟ್ಟಡ ಕಾರ್ಮಿಕರಿಗೆ ವಿತರಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ರೈತ ವಿರೋಧಿ ಕಾಯ್ದೆ ರಾಜ್ಯದಲ್ಲಿ ರದ್ದುಗೊಳಿಸಲು ಆಗ್ರಹಿಸಿ ಸೆ.4ರಂದು ಪ್ರತಿಭಟನೆ
ಈ ಸಂದರ್ಭದಲ್ಲಿ ಎಂ ವೀರಾಪೂರು, ದಾವೂದ್ ಹಟ್ಟಿ, ಗ್ರಾಮ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಕೂಸದೂಡ್ಡಿ, ನಾಗರಾಜ್, ರಮೇಶ್, ಆದಪ್ಪ ಅಂಕೂಸದೂಡ್ಡಿ, ಗ್ರಾಮ ಘಟಕ ಕಾರ್ಮಿಕರು ಇತರರು ಇದ್ದರು.
