ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಅಧ್ಯಕ್ಷರಾಗಿ ಮರಿಸ್ವಾಮಿ ಅವರು ಆಯ್ಕೆಯಾಗಿದ್ದಾರೆ.
ಆರು ತಿಂಗಳ ಹಿಂದೆ ಆನ್ಲೈನ್ ನಲ್ಲಿ ನಡೆದ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮರಿಸ್ವಾಮಿ ಹಾಗೂ ಅಭಿಲಾಷ್ ಮಧ್ಯದಲ್ಲಿ ಭರ್ಜರಿ ಪೈಪೋಟಿಯಲ್ಲಿ 6139 ಮತಗಳ ಅಂತರದಿಂದ ಮರಿಸ್ವಾಮಿ ಆವರು ಜಯಗಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡುಕರ ಅಡ್ಡವಾದ ಇಂದಿರಾ ಕ್ಯಾಂಟಿನ್; ದೊರೆಯುವುದೇ ಉದ್ಘಾಟನೆ ಭಾಗ್ಯ?*
ಒಟ್ಟು ಆನ್ಲೈನ್ ನಲ್ಲಿ 42,652 ಮತಗಳು ಚಲಾವಣೆಯಾಗಿದ್ದು ಇದರಲ್ಲಿ ಅಭಿಲಾಷ್ 17,184 ಮತಗಳನ್ನು ಪಡೆದಿದ್ದಾರೆ. ಚಾಂದ್ ಅಬ್ದುಲ್ 348 ಹಾಗೂ ಮಹ್ಮದ್ ರಸೂಲ್ 323 ಮತಗಳು ಪಡೆದಿದ್ದಾರೆ.
ಗೆಲುವಿನ ಬಳಿಕ ಮಾತನಾಡಿದ ಮರಿಸ್ವಾಮಿ, ನನಗೆ ಮತ ಹಾಕಿ ಜಯಗೊಳಿಸಿ ಒಂದು ಬಾರಿ ಅವಕಾಶ ನೀಡಿದ ಪ್ರತಿಯೊಬ್ಬರಿಗೂ ಸದಾ ಚಿರಋಣಿಯಾಗಿ ಸೇವೆ ಸಲ್ಲಿಸುತ್ತೇನೆ ಎಂದರು.
