ಜಿಲ್ಲೆ ಮಸ್ಕಿ ನಗರದ ಠಾಕೂರ ಲೇಔಟ್ ನಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಮಂಜುನಾಥ (32) ಮೃತಪಟ್ಟ ಯುವಕ ಎಂದು ಹೇಳಲಾಗಿದೆ.ಮಸ್ಕಿ ತಾಲ್ಲೂಕು ಮೆದಕಿನಾಳ ಗ್ರಾಮದಲ್ಲಿ ರಕ್ತ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ನಗರದ ಠಾಕೂರ ಲೇಔಟ್ ನ ಸುತ್ತ ಮುತ್ತ ಓಡಾಡುತ್ತಿರುವ ಸಾರ್ವಜನಿಕರಿಗೆ ದುರ್ವಾಸನೆ ಬೀರಿದೆ.ಅನುಮಾನಪಟ್ಟು ಸುತ್ತಮುತ್ತ ಗಮನಿಸಿದಾಗ ಚರಂಡಿಯಲ್ಲಿ ಮೃತ ದೇಹ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಚರಂಡಿಯಲ್ಲಿ ಶವ ಬಿದ್ದು ಎರಡು ದಿನ ಕಳೆದಿದೆ ಎಂದು ಸ್ಥಳೀಯರು ಹೇಳಲಾಗಿದೆ.ಮಾಹಿತಿ ತಿಳಿಯುತ್ತಿದ್ದಂತೆ ಮಸ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಕಾರಣ ಎಂದು ತಿಳಿದು ಬಂದಿಲ್ಲ.ಮಸ್ಕಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ
ಈ ಸುದ್ದಿ ಓದಿದ್ದೀರಾ? ರಾಯಚೂರು |ಮೇ 08 ರಂದು ಒಳ ಮೀಸಲಾತಿ ಸಮಾವೇಶ ; ನರಸಿಂಹಲು