ನಕಲಿ ದಾಖಲೆ ಸೃಷ್ಟಿಸಿ ಗೋಲ್ಡ್ ಲೋನ್ ಮಂಜೂರು ಮಾಡಿ ಸುಮಾರು 10 ಕೋಟಿ ವಂಚಿಸಿ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಬ್ಯಾಂಕ್ ಮ್ಯಾನೇಜರ್ ನರೇಂದ್ರರೆಡ್ಡಿಯನ್ನು ಶ್ರೀಶೈಲದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಬ್ರ್ಯಾಂಕ್ ಮ್ಯಾನೇಜರ್ ಕೆ.ನರೇಂದ್ರರೆಡ್ಡಿ ನಕಲಿ ದಾಖಲೆ ಸೃಷ್ಟಿಸಿ 105 ಖಾತೆಗಳನ್ನು ಸೃಷ್ಟಿಸಿ 10 ಕೋಟಿ 97 ಲಕ್ಷ ವಂಚಿಸಿದ್ದ ಇದರ ಪ್ರಕರಣ ಬಯಲಾಗುತ್ತಲೇ ಪರಾರಿಯಾಗಿದ್ದ ಇಂದು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮದುವೆ ಮಂಟಪವೇ ಬಾಲವಾಡಿ; ಅಧಿಕಾರಿಗಳಿಗೆ ಬೇಡವಾದ ಚಿಣ್ಣರ ಕೇಂದ್ರ
ನಕಲಿ ಗೋಲ್ಡ್ ಲೋನ್ ಖಾತೆಗಳಿಂದ 8 ಸಂಬಂಧಿಕರ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿದ್ದಾನೆ. ಹಿಂದಿನ ಬ್ಯಾಂಕ್ ಸಹೋದ್ಯೋಗಿ ಹೆಸರಿಗೆ 88 ಲಕ್ಷ ವರ್ಗಾವಣೆ ಮಾಡಿದ್ದ ಎಂದು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರ ತನಿಖಾ ತಂಡ ಬಂಧಿಸಿ 97 ಲಕ್ಷ್ಯ ರೂ ವಶಪಡಿಸಿಕೊಂಡಿದ್ದಾರೆ ಎಂದು ರಾಯಚೂರು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಖಚಿತಪಡಿಸಿದ್ದಾರೆ.