ರಾಯಚೂರು | ಪರಿಶಿಷ್ಟ ಜಾತಿಯವರ ಮೇಲೆ ಸುಳ್ಳು ಪ್ರಕರಣ ದಾಖಲು; ಪಿಎಸ್ಐ ಅಮಾನತಿಗೆ ಆಗ್ರಹ

Date:

Advertisements

ಪರಿಶಿಷ್ಟ ಜಾತಿಯವರ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿರುವ ಹಾಗೂ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕವಿತಾಳ ಪೊಲೀಸ್‌ ಠಾಣೆಯ ಪಿಎಸ್‌ಐ ವೆಂಕಟೇಶ ನಾಯಕ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಕವಿತಾಳ ಪಟ್ಟಣದ ಮಸ್ಕಿ ಕ್ರಾಸ್‌ನಲ್ಲಿ ಧರಣಿ ಕುಳಿತ ಪ್ರತಿಭಟನಕಾರರು ಅಂಬೇಡ್ಕರ್‌ ವೃತ್ತದವರೆಗೆ ಮೆರವಣಿಗೆ ನಡೆಸಿ ಆನ್ವರಿ ಕ್ರಾಸ್‌ನಲ್ಲಿ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಗಂಗಪ್ಪ ತೋರಣದಿನ್ನಿ ಮಾತನಾಡಿ, “ಪಿಎಸ್‌ಐ ವೆಂಕಟೇಶ ನಾಯಕ ಹಲವು ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಬಾಲಕಿ ಅಪಹರಣ, ಅತ್ಯಾಚಾರ ಪ್ರಕರಣದ ಕುರಿತು ತನಿಖೆ ನಡೆಯಬೇಕು. ಠಾಣಾ ವ್ಯಾಪ್ತಿಯ ಹಳ್ಳಿಗಳಲ್ಲಿ ಮಟ್ಕಾ, ಇಸ್ಪೀಟ್‌ ಜೂಜಾಟ, ಕೋಳಿ ಪಂದ್ಯ, ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಗಾಂಜಾ ಮಾರಾಟ, ಅಕ್ರಮವಾಗಿ ಮರಳು ಸಾಗಣೆ ನಡೆಯುತ್ತಿದೆ. ಅದಕ್ಕೆ ಪಿಎಸ್‌ಐ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.

Advertisements

“ಠಾಣೆ ವ್ಯಾಪ್ತಿಯ ಪ್ರತಿಯೊಂದು ಬಾರ್‌ನಿಂದ ತಿಂಗಳು ವಸೂಲಿ ಹಣ ಮತ್ತು ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲು ಒಂದು ಟ್ರ್ಯಾಕ್ಟರ್‌ಗೆ ತಿಂಗಳಿಗೆ ₹40,000 ನಿಗದಿಯಾಗಿದೆ. ಪ್ರತಿ ಹಳ್ಳಿಯಲ್ಲೂ 3 ರಿಂದ 4 ಪಾನ್‌ ಶಾಪ್‌ಗಳಲ್ಲಿ ಮದ್ಯದ ಬಾಟಲಿಗಳು ದೊರೆಯುತ್ತವೆ. ಕಳ್ಳತನವಾದಾಗ ಮತ್ತು ಕೊಲೆಗಳಾದಾಗ 24 ಗಂಟೆಗಳಲ್ಲಿ ಪತ್ತೆಹಚ್ಚಿ ಕಳ್ಳರನ್ನು ಮತ್ತು ಕೊಲೆಗಡುಕರನ್ನು ಬಂಧಿಸುತ್ತಾರೆ. ಆದರೆ ಪ್ರತಿ ಹಳ್ಳಿಗಳಲ್ಲೂ ದಿನನಿತ್ಯ ನಡೆಯುವ ಮದ್ಯ ಮಾರಾಟ, ಮಟ್ಕಾ ಒಸಿ ದಂಧೆಗಳು ಮಾತ್ರ ಇವರ ಗಮನಕ್ಕೆ ಬರುವುದಿಲ್ಲವೇಕೆ? ಇದಕ್ಕೆ ಮೇಲಾಧಿಕಾರಿಗಳೇ ಉತ್ತರಿಸಬೇಕಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಂದ ಸಿಂಧನೂರು ಡಿವೈಎಸ್‌ಪಿ ಬಿ ಎಸ್ ತಳವಾರ ಅವರು ಒಂದು ವಾರದೊಳಗೆ ನಿಮ್ಮ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಹೂಳಲು ಸ್ಮಶಾನವಿಲ್ಲದೆ ತಿ. ನರಸೀಪುರದಿಂದ ದಾವಣಗೆರೆಗೆ ಮೃತದೇಹ ಕೊಂಡೊಯ್ದ ಅಲೆಮಾರಿ ಕೊರಚ ಸಮುದಾಯ

ಸಂಘಟನೆ ಮುಖಂಡರಾದ ಬಾಲಸ್ವಾಮಿ ಜಿನ್ನಾಪುರ, ತುರುಮಂದೆಪ್ಪ ಕಟ್ಟಿಮನಿ, ಲಾಳ್ಳೆಪ್ಪ, ಅರಳಪ್ಪ ತುಪ್ಪದೂರು, ಮೌನೇಶ ಕೊಡ್ಲಿ, ಸಂತೋಷ ಕಲಶೆಟ್ಟಿ, ಹುಚ್ಚಪ್ಪ ಬುಳ್ಳಾಪುರ, ರಮೇಶ ಗೂಗೆಬಾಳ, ಬಸವರಾಜ ಅಮೀನಗಡ, ಹನುಮಂತ ಬುಳ್ಳಾಪುರ, ಮೌನೇಶ ಬುಳ್ಳಾಪುರ, ಎಚ್ ಬಸವರಾಜ, ಅಮರೇಶ, ಈರಣ್ಣ ಕೆಳಗೇರಿ, ಜೋಸೆಫ್‌ ತೋರಣದಿನ್ನಿ, ಹುಚ್ಚರಡ್ಡಿ ಹಿರೇದಿನ್ನಿ, ಸುಧಾಕರ, ಕುಪ್ಪಣ್ಣ, ಅಬ್ರಾಹಂ, ವಿಜಯರಾಣಿ, ಪದ್ಮಾ, ಮಂಜುಳಾ, ಮೋನಮ್ಮ, ತಾಯಮ್ಮ, ಹನುಮಂತಿ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X