ರೈತರಿಗೆ ಅಗತ್ಯವಾದ ರಸಗೊಬ್ಬರ ದೊರೆಯದ ಪರಿಸ್ಥಿತಿ ತೀವ್ರವಾಗಿದ್ದು, ಹೊಲಗದ್ದೆಗಳಲ್ಲಿ ಬಿತ್ತನೆ ಕಾರ್ಯಕ್ಕೆ ಅಡೆತಡೆಯಾಗಿದೆ. ಹಲವೆಡೆ ಗೊಬ್ಬರದ ಹಂಚಿಕೆಯಲ್ಲಿ ಅನಿಯಮಿತತೆ ಹಾಗೂ ಆಕ್ರಮ ನಡೆದಿರುವುದಾಗಿ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ದಲಿತ ಸೇನೆ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ಒತ್ತಾಯಿಸಿದ್ದಾರೆ.
ಗೊಬ್ಬರದ ಅಗತ್ಯದ ಸಮಯದಲ್ಲಿ TAPCMS ಸಂಘಗಳ ಮೂಲಕ ಸರಿಯಾದ ಬೆಲೆಗೆ ಹಾಗೂ ಸಮರ್ಪಕ ಪ್ರಮಾಣದಲ್ಲಿ ಗೊಬ್ಬರ ಲಭ್ಯವಿಲ್ಲದ ಕಾರಣ ರೈತನ ಭವಿಷ್ಯಕ್ಕೆ ಹೊರೆ ಹೆಚ್ಚಿಸುವಂತಹ ತೊಂದರೆಗೂ ದಾರಿ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ನಕಲಿ ನೆಪ, ಬಯೋಮೆಟ್ರಿಕ್ ದುರುಪಯೋಗ ರೈತರ ಹೆಸರಿನಲ್ಲಿ ರೈತರನ್ನು ಮೋಸಗೊಳಿಸುತ್ತಿದ್ದು, ಅವರಿಂದ ಆಧಾರ್ ಬಯೋಮೆಟ್ರಿಕ್ ಪಡೆದು, ಅದರ ಆಧಾರದಲ್ಲಿ ಗೊಬ್ಬರ ಸಂಗ್ರಹಿಸಿ ಮಾರುಕಟ್ಟೆಯಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿರುವ ಕುರಿತು ಆತಂಕಕಾರಿ ಘಟನೆಗಳು ಬೆಳಕಿಗೆ ಬರುತ್ತಿವೆ ಕೂಡಲೇ ಸೂಕ್ತ ತನಿಖೆ ನಡೆಸಿ ಕಾನೂನು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮರ ಬಿದ್ದು ಇಬ್ಬರು ಸ್ಥಳದಲ್ಲೇ ಸಾವು, ಓರ್ವ ಗಂಭೀರ ಗಾಯ
ರೈತರಿಗೆ ಸರಿಯಾದ ಸಮಯದಲ್ಲಿ, ಸರಿಯಾದ ದರದಲ್ಲಿ ಗೊಬ್ಬರ ಲಭ್ಯವಾಗುವಂತೆ ಖಚಿತಪಡಿಸಬೇಕು. ಈ ಸಂಬಂಧ ವಿಶೇಷ ತನಿಖಾ ತಂಡ (SIT) ರಚಿಸಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಬೇಕು ಮತ್ತು TAPCMS ನಿರ್ದೇಶಕರು ಹಾಗೂ ಸಂಬಂಧಪಟ್ಟ ಅಧಿನಿರೀಕ್ಷಕರ ವಿರುದ್ಧ ತನಿಖೆ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
