ಅರಣ್ಯ ಇಲಾಖೆಯವರು ರೈತರು ಬೆಳೆದ ಬೆಳೆಗಳನ್ನು ಜೆಸಿಬಿ ಮೂಲಕ ನಾಶ ಮಾಡಿದ್ದು, ಅಪಾರ ನಷ್ಟ ಉಂಟು ಮಾಡಿದ್ದಾರೆ. ಹೀಗಾಗಿ, ತಪ್ಪಿತಸ್ಥ ಅಧಿಕಾರಿಗಳಿಗೆ ಕಠಿಣ ಕ್ರಮ ಜರುಗಿಸಬೇಕು ಹಾಗೂ ರೈತರಿಗೆ ಪರಿಹಾರ ಒದಗಿಸಬೇಕು ಎಂದು ರಾಜ್ಯ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿ ನಿತೀಶ್ ಕೆ ಅವರಿಗೆ ಮನವಿ ಸಲ್ಲಿಸಿದರು.
ಬೆಳೆ ನಾಶಗೊಂಡ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿ ಶುಕ್ರವಾರದಂದು ಅಮರೇಶ್ವರ ಕ್ರಾಸ್‌ನಿಂದ ನಾಶ ಮಾಡಿದ ಜಮೀನವರೆಗೆ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಲಾಗುವುದು ಎಂದು ಹೇಳಿದರು.
ತಾಲೂಕಿನ ಯರಡೋಣ ಸೀಮಾಂತರ ಸರ್ವೇ ನ. 32ರಲ್ಲಿ ಸುಮಾರು 25 ಜನರಿಗೆ ಭೂಮಿ ಮಂಜೂರಾಗಿದ್ದು, ಸುಮಾರು ವರ್ಷಗಳಿಂದ ಉಳುಮೆ ಮಾಡುತ್ತಾ ಬಂದಿರುತ್ತಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಬಂದು, ಯಾವುದೇ ನೋಟಿಸ್ ನೀಡದೆ ರೈತರನ್ನು ಕೃಷಿ ಭೂಮಿಯಿಂದ ಒಕ್ಕಲೆಬ್ಬಿಸಿ ಬೆಳೆಯನ್ನು ನಾಶ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಕಿಡಿಕಾರಿದರು.
ದೇವರಭೂಪೂರು ಶೀಮಾಂತರದ 151. 155, 159 ಹಾಗೂ ಪರಾಂಪೂರು ಸೀಮಾಂತರ 61 ಸೇರಿದಂತೆ ಇನ್ನುಳಿದ ತಾಲೂಕಿನಲ್ಲಿರುವ ಕೃಷಿ ಜಮೀನಿನನ್ನು ರೈತರಿಗೆ ಒದಗಿಸಿ ಹದ್ದುಬಸ್ತು ಮಾಡಬೇಕು ಹಾಗೂ ತಕ್ಷಣ ತಪ್ಪಿತಸ್ಥರ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು.
ಇದನ್ನು ಓದಿದ್ದೀರಾ? ರಾಯಚೂರು | ಲಿಂಗಸುಗೂರು ಪುರಸಭೆಗೆ ಅಧ್ಯಕ್ಷರಾಗಿ ಬಾಬುರೆಡ್ಡಿ ಅವಿರೋಧ ಆಯ್ಕೆ
ಬೃಹತ್ ಮೆರವಣಿಗೆ ದಿನವನ್ನು ತಾವುಗಳು ಹೋರಾಟದ ಸ್ಥಳಕ್ಕೆ ಆಗಮಿಸಿ ರೈತರ ಆಹವಾಲುಗಳನ್ನು ಸ್ವೀಕರಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಮನವಿ ನೀಡಿದರು.
ಸಂದರ್ಭದಲ್ಲಿ ಉಮಾದೇವಿ , ದುರ್ಗಾಪ್ರಸಾದ ರೆಡ್ಡಿ , ಶಿವಪುತ್ರಗೌಡ ನಂದಿಹಾಳ , ಶರಣಪ್ಪ , ಲಕ್ಷಣ ನಾಗರಹಾಳ ಹನುಮಂತ ,ಆದಪ್ಪ ನಾಯಕ ಇನ್ನಿತರರು ಉಪಸ್ಥಿತರಿದ್ದರು.
