ರಾಯಚೂರು | ರೈತರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು: ಸಚಿವ ಡಾ.ಶರಣಪ್ರಕಾಶ ಪಾಟೀಲ್

Date:

Advertisements

ಜಿಲ್ಲೆಯ ವಿವಿಧ ಅಭಿವೃದ್ದಿ ಯೋಜನೆಗಳಲ್ಲಿ ಅಕ್ರಮ ಆರೋಪ ಕೇಳಿಬಂದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸತ್ಯವಿದ್ದರೆ ಕ್ರಮಕ್ಕೆ ಮುಂದಾಗಬೇಕು ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ರಾಯಚೂರು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಜೋಳ ಖರೀಧಿ ಕೇಂದ್ರ ಸ್ಥಾಪಿಸಲು ತ್ವರಿತವಾಗಿ ನಿರ್ಧರಿಸಬೇಕೆಂದು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಆಗ್ರಹಿಸಿದರು.

ಕಳೆದ ವರ್ಷ ಖರೀದಿ ಕೇಂದ್ರ ವಿಳಂಬವಾಗಿದ್ದರಿಂದ ರೈತರು ತೊಂದರೆ ಅನುಭವಿಸುವಂತಾಯಿತು. ಜಿಲ್ಲಾಧಿಕಾರಿಗಳು ಕೂಡಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ರಾಜ್ಯ ಸರ್ಕಾರ ತ್ವರಿತವಾಗಿ ಖರೀದಿ ನಡೆಸಲು ಅನುಮತಿ ನೀಡಬೇಕೆಂದರು.

Advertisements

ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಮಾತನಾಡಿ ಖರೀದಿ ಕೇಂದ್ರಗಳಲ್ಲಿ ರೈತರ ಫಸಲು ಖರೀದಿ ಸಕಾಲಕ್ಕೆ ಮಾಡುತ್ತಿಲ್ಲ. ಸೂಸೈಟಿಗಳು ರೈತರಲ್ಲವರಿಂದ ಖರೀಧಿ ಮಾಡುತ್ತಿರುವುದು ನಡೆಯುತ್ತಿದೆ ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮಾತನಾಡಿ, ಸಿಂಧನೂರಿನಲ್ಲಿ ಜೋಳ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದ್ದು ಇಂದಿಗೂ ಕ್ರಮವಾಗಿಲ್ಲ. ಭತ್ತ ಬೆಳೆದ ರೈತರನ್ನು ಜೋಳ ಬೆಳೆದಿರುವುದಾಗಿ ನಮೂದಿಸಿ ವಂಚಿಸಲಾಗುತ್ತಿದೆ ಎಂದರು.

ಮಾರ್ಕೆಟಿಂಗ್ ಬೋಡ್ ಅಧಿಕಾರಿ ಶಿವಬಸ್ಸಪ್ಪ ಎಂಬುವವರು ರೈತರಿಂದ ಹಣ ಪಡೆದು ರೈತರು ಹಾಗೂ ಸರ್ಕಾರಕ್ಕೂ ವಂಚಿಸಿದ್ದಾರೆ. ಕೆಳಹಂತದ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ. ಜೋಳ ಬೀಜ ಖರೀಧಿಗೆ ನೂಕುನುಗ್ಗಲು ನಡೆದು ಲಾಠಿಚಾರ್ಜ ನಡೆದಿದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಾಹಿತಿ ನೀಡಿ ಸಿಂಧನೂರಿನಲ್ಲಿ ಈ ವರ್ಷ ಬೇಡಿಕೆ ಹೈಬ್ರಿಟ್ ತಳಿಗೆ ಬೇಡಿಕೆ ಹೆಚ್ಚು ಬಂದಿದೆ. ಶೇ.30ರಷ್ಟು ಬೀಜ ಉತ್ಪಾದನೆ ಕೊರತೆಯಿದೆ. ಎಲ್ಲಾ ಕಡೆಯಿಂದ 6 ಸಾವಿರ ಕ್ವಿಂಟಾಲ್ ಬೀಜ ವ್ಯವಸ್ಥೆ ಮಾಡಲಾಗಿದೆ ಎಂದರು. ಜೋಳ ಖರೀದಿ ಮಾಡಿದ ರೈತರಿಗೆ ಎಲ್ಲ ಹಣ ನೀಡಲಾಗಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕರು ತಿಳಿಸಿದರು.

ಸಿಂಧನೂರು ತಾಲೂಕಿನಲ್ಲಿ ಇನ್ನೂ ರೈತರಿಗೆ ಜೋಳ ಮಾರಾಟ ಮಾಡಿದ ಹಣವೇ ಬಂದಿಲ್ಲ ಎಂದರು. ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದು 67 ಸಾವಿರ ಕೋಟಿ ರೂ ಇನ್ನೂ ಬಾಕಿಯಿದೆ ಎಂದು ಬಸನಗೌಡ ಬಾದರ್ಲಿ ಹೇಳಿದರು. ನೇರ ಖಾತೆ ಹಣ ಜಮಾ ಸಮಸ್ಯೆಯಾಗಿದ್ದು, ಸರಿಪಡಿಸಬೇಕೆಂದು ಹಂಪನಗೌಡ ಬಾದರ್ಲಿ ಒತ್ತಾಯಿಸಿದರು.

ಉಸ್ತುವಾರಿ ಕಾರ್ಯದರ್ಶಿ ರಿಜೂ ಮಾತನಾಡಿ, 2024-25 ನೇ ಸಾಲಿನಲ್ಲಿ ಖರೀದಿ ಕೇಂದ್ರಕ್ಕೆ ಹಣಕಾಸಿನ ಕೊರತೆಯಿಲ್ಲ ಎಂದರು. ಸಭೆಗೆ ಜೋಳ ಖರೀಧಿ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಮಾರ್ಕೆಟಿಂಗ್ ಬೋರ್ಡ ಅಧಿಕಾರಿ ಸಭೆಗೆ ಗೈರಾಗಿದ್ದರಿಂದ ಶೋಕಾಸ್ ನೋಟಿಸ್ ನೀಡಲು ಸಚಿವರು ಸೂಚಿಸಿದರು. ಸಮರ್ಪಕ ಸಮಜಾಯಿಷಿ ನೀಡದೇ ಇದ್ದರೆ ಅಮಾನತಿಗೆ ಸೂಚಿಸಿದರು.

ಸಿಂಧನೂರು ಆಹಾರ ಇಲಾಖೆಯಲ್ಲಿ ನಡೆದಿರುವ ಅಕ್ರಮ ಕುರಿತು ಆಹಾರ ಇಲಾಖೆ ಆಯುಕ್ತರಿಗೆ ವರದಿ ನೀಡಲಾಗಿದೆ. ತಪ್ಪಿತಸ್ಥರ ವಿರುದ್ದ ಶೀಘ್ರವಾಗಲಿದೆ ಎಂದು ಡಿಸಿ ನಿತೀಶ ಸಭೆಗೆ ಮಾಹಿತಿ ನೀಡಿದರು. ಕೃಷಿಇಲಾಖೆ ಜೋಳ ಬಿತ್ತನೆ ಕುರಿತು ತಪ್ಪು ಮಾಹಿತಿ ಸಂಗ್ರಹಿಸಿದೆ ಎಂದು ಬಸನಗೌಡ ಬಾದರ್ಲಿ ದೂರಿದರು.

ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರು ಮಾತನಾಡಿ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಕಾಮಗಾರಿಗಳ ಸ್ಥಳಪರಿಶೀಲನೆ ನಡೆಸುತ್ತಿಲ್ಲ. ಲಿಂಗಸೂಗೂರು ತಾಲೂಕಿನಲ್ಲಿ ಬದು ನಿರ್ಮಾಣ ಹೆಸರಿನಲ್ಲಿ 2 ಕೋಟಿ ರೂ ಅಕ್ರಮವಾಗಿದೆ. ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಿದ್ದಾರೆ. ಕ್ರಮವಾಗಿಲ್ಲ ಎಂದರು. ಹಂಪನಗೌಡ ಬಾದರ್ಲಿ ಮಾತನಾಡಿ ರೈತರೇ ಭತ್ತ ಬೆಳೆದು ಜೋಳವೆಂದು ನಮೂದಿಸಿದ್ದಾರೆ. ಜೋಳ ಬೆಳದರಲ್ಲಿ ಯಾವುದೆ ಅಕ್ರಮವಾಗಿಲ್ಲ ಎಂದು ಸಮರ್ಥಿಸಿಕೊಂಡರು. ತೋಟಗಾರಿಕೆ ಇಲಾಖೆಯಿಂದ ಕೊನೆ ಭಾಗದ ರೈತರಿಗೆ ನೀರಿನಿಂದ ವಂಚಿತರಾದ ರೈತರಿಗೆ ಜಾಗೃತಿ ಮೂಡಿಸಿ ತೋಟಗಾರಿಕೆ ಬಳಕೆಗೆ ಪ್ರೋತ್ಸಾಹಿಸಬೇಕೆಂದು ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಮಾತನಾಡಿ, ಕೃಷಿ ಸಂಚಾಯಾ ಯೋಜನೆಯಡಿ ಸಬ್ಸಿಡಿ ಪಡೆದ ರೈತರ ಜಮೀನಿಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು .ಕೆಲ ರೈತರು ಸಬ್ಸಿಡಿಗೆ ಮಾತ್ರ ಯೋಜನೆ ಬಳಕೆ ಮಾಡಿಕೊಂಡಿರುವ ದೂರುಗಳಿವೆ ಎಂದರು. ಅಧಿಕಾರಿಗಳು ಕೇವಲ ಯೋಜನೆಯ ಗುರಿ ಮುಟ್ಟಲು ಮಾತ್ರ ಕ್ರಮವಹಿಸುತ್ತಾರೆ. ವಸ್ತುಸ್ಥಿತಿಯೇ ಬೇರೆಯಾಗಿದೆ ಎಂದರು.

ನಗರದ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತರ ಹಾನಿಗೆ ಅಧಿಕಾರಿಗಳ ವೈಫಲ್ಯತೆ ಕಾರಣವಾಗಿದೆ. ಎಪಿಎಂಸಿ ಅಧಿಕಾರಿಗಲು ಮಾರುಕಟ್ಟೆಗೆ ಈರುಳ್ಳಿ ತರದಂತೆ ಪ್ರಕಟಣೆ ನೀಡುತ್ತಾರೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ಈರುಳ್ಳಿ ಬೆಳೆಗಾರರ ನಷ್ಟಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿ ಎಪಿಎಂಸಿ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ಎಪಿಎಂಸಿಯಲ್ಲಿ ಮೂರು ಜನ ಮಾತ್ರ ಖರೀಧಿದಾರರಿಂದು 6 ಸಾವಿರ ಕ್ವಿಂಟಾಲ್ ಮಾರುಕಟ್ಟೆ ಬಂದಿದ್ದರಿಂದ ಖರೀಧಿ ಮಾಡಲು ನಿರಾಕರಿಸಿದ್ದರಿಂದ ರೈತರು ಮಾರುಕಟ್ಟೆಗೆ ಬರದಂತೆ ತಡೆಯಲಾಗಿದೆ ಎಂದರು. ಎಪಿಎಂಸಿ ನಿರ್ಧಾರದಿಂದ ರೈತರು ಬೆಳೆ ಹಾನಿಯಾಗಿದೆ ಪರಿಹಾರ ಒದಗಿಸಬೇಕೆಂದರು.

ಇದನ್ನು ಓದಿದ್ದೀರಾ? ರಾಯಚೂರು | ಆರ್‌ಡಿಸಿಸಿ ಬ್ಯಾಂಕ್‌ನಲ್ಲಿ ಹಗಲು ದರೋಡೆ; ಖಾತೆಗಳ ದುರ್ಬಳಕೆ ಆರೋಪ

ಎಲ್ಲಾ ಇಲಾಖೆ ಅಧಿಕಾರಿಗಳು ಯೋಜನೆಗಳ ಬ್ರಷ್ಟಚಾರದ ಆರೋಪ ಬಂದರೆ ನಿಮ್ಮ ಹಂತದಲ್ಲಿಯೇತನಿಖೆ ನಡೆಸಿ ಕ್ರಮವಹಿಸಬೇಕು. ದೂರುಗಳ ಬಂದಲ್ಲಿ ನಿಮ್ಮ ವಿರುದ್ದ ಕ್ರಮವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ಎಂ.ರೇವಣ್ಣ, ನಿಗಮಗಳ ಅಧ್ಯಕ್ಷರುಗಳಾದ ಬಸನಗೌಡ ತುರ್ವಿಹಾಳ, ಬಸನಗೌಡ ದದ್ದಲ್, ಡಿಸಿ ನಿತೀಶ, ಜಿ.ಪಂ ಸಿಇಓ ರಾಹುಲ್ ತುಕಾರಾಂ ಪಾಂಡ್ವ, ಎಸ್‌ಪಿ ಪುಟ್ಟಮಾದಯ್ಯ ಇದ್ದರು. ಶಾಸಕರುಗಳಾದ ಹಂಪಯ್ಯನಾಯಕ, ಹಂಪನಗೌಡ ಬಾದರ್ಲಿ, ಡಾ.ಶಿವರಾಜ ಪಾಟಿಲ್ ಎಲ್‌ಎಲ್‌ಸಿಗಳಾದ ಎ.ವಸಂತಕುಮಾರ, ಚಂದ್ರಶೇಖರ ಪಾಟೀಲ್, ಬಸನಗೌಡ ಬಾದರ್ಲಿ ಸೇರಿ ಗ್ಯಾರಂಟಿ ಯೋಜನಾ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ತಾಲೂಕ ಅಧ್ಯಕ್ಷರುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X