ಎರಡನೇ ಮದುವೆಗೆ ಮಗು ಅಡ್ಡಿಯಾಗುತ್ತದೆಂದು ಭಾವಿಸಿ ವಿಕೃತ ತಂದೆಯೊಬ್ಬ ತನ್ನ ಮಗುವನ್ನೇ ಕೊಂದು, ಕಲ್ಲಿನ ಕೆಳಗೆ ಮುಚ್ಚಿಟ್ಟಿದ್ದ ಧಾರುಣ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಮುದಗಲ್ ಸಮೀಪದ ಕನಸಾವಿ ಗ್ರಾಮದಲ್ಲಿ ನಡೆದಿದೆ.
ಅಭಿನವ(14 ತಿಂಗಳು) ಎಂಬ ಮಗುವನ್ನು ಕೊಂದ ದುಷ್ಕರ್ಮಿ ತನ್ನ ತಂದೆ ಮಹಾಂತೇಶ ಎಂದು ತಿಳಿದುಬಂದಿದೆ. ಮರು ಮದುವೆ ಆಗಲು ಆಸೆಪಟ್ಟಿದ್ದ ಮಹಾಂತೇಶ್ ಪತ್ನಿಗೆ ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಸಬೂಬು ಉತ್ತರ ನೀಡಿದ್ದಾನೆ.
ಮಹಾಂತೇಶ ಮತ್ತೊಂದು ಮದುವೆಯಾಗುವ ತಯಾರಿ ನಡೆಸಿದ್ದು, ಈ ಮದುವೆಗೆ ತನ್ನ ಮಗು ಅಡ್ಡಿಯಾಗುತ್ತದೆಂದು ತಿಳಿದು ತನ್ನ ಮಗುವನ್ನೇ ಕೊಲೆ ಮಾಡಿ ಕಲ್ಲಿನ ಸಂದಿಯಲ್ಲಿ ಮುಚ್ಚಿಟ್ಟದ್ದಾನೆ.
ಈ ಸುದ್ದಿ ಓದಿದ್ದೀರಾ? ಹಾಸನ | ಸೇಬು, ಮೋಸಂಬಿ ಹಣ್ಣಿನೊಳಗೆ ಗಾಂಜಾ; ಜೈಲಿನೊಳಗೆ ಎಸೆಯಲು ಯತ್ನಿಸಿದ ಇಬ್ಬರ ಬಂಧನ
ಮಗು ಕಾಣೆಯಾದ ಕುರಿತು ನಾಪತ್ತೆ ಪ್ರಕರಣವನ್ನು ದಾಖಲಿಸಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು ತಂದೆ ಮಹಾಂತೇಶನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ಮಹಾಂತೇಶ ತಪ್ಪು ಒಪ್ಪಿಕೊಂಡಿದ್ದಾನೆ.
ಮೂರು ದಿನಗಳ ಬಳಿಕ ಮಗುವನ್ನು ಪೊಲೀಸರು ಪತ್ತೆ ಮಾಡಿ, ಮಗುವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.