ರಾಯಚೂರು ಜಿಲ್ಲೆಯ ಬಡ ಕುಟುಂಬಗಳು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ‘ವಂಚನೆ ಸಂತ್ರಸ್ತ ಠೇವಣಿದಾರ ಕುಟುಂಬ’ದವರು ಪ್ರತಿಭಟನೆ ನಡೆಸಿದರು.
ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ‘ವಂಚನೆ ಸಂತ್ರಸ್ತ ಠೇವಣಿದಾರ ಕುಟುಂಬ’ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ್ದ ಈ ಪ್ರತಿಭಟನೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಲಾಯಿತು.
ಜಿಲ್ಲೆಯಲ್ಲಿ ಅನೇಕರು ಪಿಎಸಿಎಲ್, ಸಾಯಿ ಪ್ರಸಾದ್, ಸಮೃದ್ಧ ಜೀವನ, ಗರಿಮಾ ಹಿಂದುಸ್ತಾನ, ಅಗ್ರಿಗೋಲ್ಡ್ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದು, ಕಂಪನಿಗಳು ಮುಚ್ಚಿಹೋದ ಪರಿಣಾಮ 2014ರಿಂದ ಇದುವರೆಗೆ ಗ್ರಾಹಕರಿಗೆ ಹಣ ಮರಪಾವತಿಯಾಗಿಲ್ಲ. ಸರ್ಕಾರ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸಿಲ್ಲ ಎಂದು ದೂರಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ದುಬಾರಿ ಬೆಲೆಯ ಸೀರೆ ಕಳ್ಳತನ: ನಾಲ್ವರು ಮಹಿಳೆಯರ ಬಂಧನ; ₹17.5 ಲಕ್ಷ ಮೌಲ್ಯದ ರೇಷ್ಮೆ ಸೀರೆ ವಶ
ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿದವರ ಪೈಕಿ ಬಡ ಕುಟುಂಬ, ಮಧ್ಯಮ ವರ್ಗದವರೇ ಹೆಚ್ಚಾಗಿದ್ದು, ಸರ್ಕಾರವು ನ್ಯಾಯ, ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಹನುಮಂತಪ್ಪ, ಕಳಕಪ್ಪ, ರಾಜಾರಾಮ, ಭೀಮನಗೌಡ ಇದ್ದರು.
