ರಾಯಚೂರು | ಹೆಣ್ಣು ಮಕ್ಕಳ ಪೂರ್ಣ ಶಿಕ್ಷಣ, ದೇಶದ ರಕ್ಷಣೆ; ಕ್ರೈ ಸಂಸ್ಥೆಯ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ

Date:

Advertisements

ಮೊದಲಿಗೆ ಮನೆ ಮನೆಗೆ ಭೆಟಿ ಮಾಡಿ ಮನೆಯಲ್ಲಿರುವ ಹೆಣ್ಣು ಮಗು ಕಡ್ಡಾಯವಾಗಿ ವೃತ್ತಿಪರ ಕೋರ್ಸ್ ಶಿಕ್ಷಣವನ್ನು ಪಡೆಯಬೇಕೆಂದು ಮನೆ ಬೇಟಿ ಮುಖಾಂತರ ತಿಳಿಸಲಾಯಿತು. ಮಕ್ಕಳೊಂದಿಗೆ ಓಣಿಗಳಿಗೆ ಹೋಗಿ ಜಾಥಾಗಳೊಂದಿಗೆ ಹಿಂದಿನ ದಿನ ಭಾರತೀಯ ಹೆಣ್ಣು ಮಕ್ಕಳು ಸಬಲೀಕರಣ ಆಗಬೇಕೆಂದರೆ, ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಗಾಗಿ ಬಾಲಕಿಯರ ಶಿಕ್ಷಣದ ಮಹತ್ವವನ್ನು ಉತ್ತೇಜಿಸುವ ಮೂಲಕ ಲಿಂಗ ಅಸಮಾನತೆಗಳನ್ನು ಪರಿಹರಿಸಲು ಉದ್ದೇಶಿಸಿದೆ. ಕಾರ್ಯಕ್ರಮವನ್ನು ಉದ್ಘಾಟನೆಯ ಮುಖಾಂತರ ಕೆ ಪಿ ಅನಿಲ್ ಕುಮಾರ್ ಪ್ರಾರಂಭಿಸಿದರು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮುಷ್ಠೂರು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ “ಹೆಣ್ಣು ಮಕ್ಕಳ ಪೂರ್ಣ ಶಿಕ್ಷಣ” ದೇಶದ ರಕ್ಷಣೆ ಎಂಬ ಕ್ರೈ ಸಂಸ್ಥೆಯು ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

“ದೇಶಾದ್ಯಂತ ಲಕ್ಷಾಂತರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಜತೆಗೆ ಹೆಣ್ಣು ಮಕ್ಕಳು ಪ್ರೌಢಶಾಲೆ ಮತ್ತು ಪದವಿ ಪೂರ್ವ ಆದಂತಹದವರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮಕ್ಕಳ ಹಕ್ಕುಗಳ ಪ್ರಮುಖ ಸಂಸ್ಥೆಯಾಗಿರುವ ಕ್ರೈ- ಚೈಲ್ಡ್ ರೈಟ್ಸ್ ಅಂಡ್ ಯು(CRY) ವಿಶೇಷವಾದ 7 ವಾರಗಳ ರಾಷ್ಟ್ರೀಯ ಅಭಿಯಾನವನ್ನು ಹೆಣ್ಣು ಮಕ್ಕಳ ಪೂರ್ವ ಶಿಕ್ಷಣ ದೇಶದ ರಕ್ಷಣೆ ಎಂಬ ರಾಷ್ಟ್ರೀಯ ಜಾಗೃತಿ ಅಭಿಯಾನವನ್ನು ದೇಶದ 20 ರಾಜ್ಯಗಳಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಹೆಣ್ಣು ಮಕ್ಕಳ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸುವ ಪ್ರತಿ ಹೆಣ್ಣು ಮಗುವನ್ನು ಪ್ರೌಢಶಾಲೆಗೆ, ಕಾಲೇಜಿಗೆ ಕಳುಹಿಸಿ ವ್ಯಾಸಂಗ ಮುಂದುವರೆಸಬೇಕೆಂಬುದು ಅಭಿಯಾನದ ಉದ್ದೇಶ” ಎಂದು ಕ್ರೈ ಸಂಸ್ಥೆಯ ಕೆ ಪಿ ಅನಿಲ್ ಕುಮಾರ್ ಹೇಳಿದರು.

Advertisements

“ಈ ಅಭಿಯಾನದ ಭಾಗವಾಗಿ ಜಿಲ್ಲೆಯ 120 ಗ್ರಾಮಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಜಾಗೃತಿ ಕುರಿತು ಜಾಥಾಗಳನ್ನು ಹಮ್ಮಿಕೊಳ್ಳುವುದು ಎಸ್‌ಡಿಎಂಸಿ ಸಮಿತಿಗಳ ಜತೆಗೆ ಸಂವಹನ ನಡೆಸುವುದು ಮತ್ತು ಸಮುದಾಯಕ್ಕೆ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಹತ್ವದ ಕುರಿತು, ಬೀದಿನಾಟಕ ಮೂಲಕ ಜಾಗೃತಿ ಮೂಡಿಸುವುದು ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳನ್ನು 7 ವಾರಗಳ ಕಾಲ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ” ಎಂದು ಹೇಳಿದರು.

“ಪ್ರತಿ ಹೆಣ್ಣು ಮಗುವನ್ನು ಶಾಲೆಗಳು ಮತ್ತು ಕಾಲೇಜುಗಳಿಗೆ ತರಲು ಸಂಘಟಿತ ಪ್ರಯತ್ನಗಳನ್ನು ಮಾಡುತ್ತದೆ. ಇದರಿಂದಾಗಿ ಅವರು ಉನ್ನತ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಬಹುದು. ಕರ್ನಾಟಕದಲ್ಲಿ ಬೆಂಗಳೂರು, ರಾಯಚೂರು, ಗುಲ್ಬರ್ಗ, ಬೆಳಗಾವಿ ಮತ್ತು ಕೋಲಾರ ಸೇರಿದಂತೆ ಐದು ಜಿಲ್ಲೆಗಳಲ್ಲಿ ಭಾರತದ 20 ರಾಜ್ಯಗಳಲ್ಲಿ ಅದರ ಮಧ್ಯಸ್ಥಿಕೆ ಯೋಜನೆಗಳಲ್ಲಿ ಅಭಿಯಾನವು ಸೋಮವಾದಿಂದ ಪ್ರಾರಂಭವಾಗಿದೆ” ಎಂದು ತಿಳಿಸಿದರು.

“2009ರ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆಯನ್ನು 14ವರ್ಷದೊಳಗಿನ ಭಾರತೀಯ ಮಕ್ಕಳಿಗೆ ಸಾರ್ವತ್ರಿಕ ಶಿಕ್ಷಣವನ್ನು ಒದಗಿಸಲು ಸ್ಥಾಪಿಸಲಾಯಿತು. ಈ ಹೆಗ್ಗುರುತು ಕಾಯ್ದೆಯನ್ನು ತನ್ನ 15ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ಅನೇಕ ಮಕ್ಕಳು ವಿಶೇಷವಾಗಿ ಹುಡುಗಿಯರು ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣವನ್ನು ಪಡೆಯಲು ಇನ್ನೂ ಗಮನಾರ್ಹ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ” ಎಂದರು.

“2030ರ ವೇಳೆಗೆ ಸಮಾನ ಶಿಕ್ಷಣಕ್ಕಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳು ಅನುಗುಣವಾಗಿ 18 ವರ್ಷದವರೆಗೆ ಸಾರ್ವತ್ರಿಕ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ವಿಸ್ತರಿಸುವ ಗುರಿಯನ್ನು ಶಿಕ್ಷಣ ನೀತಿ ಹೊಂದಿದೆ. ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಸಭೆ ಮಾಡಲಾಯಿತು. ಸಮುದಾಯ-ಜನರ ನಡುವೆ ಕಾರ್ಯಕ್ರಮ ಉದ್ದೇಶವನ್ನು ತಿಳಿಸಲಾಗುವುದು”ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನಕ್ಷತ್ರ ಆಮೆಗಳ ಬೇಟೆಯಾಡುತ್ತಿದ್ದ ಆರೋಪಿಗಳ ಬಂಧನ

ಈ ಸಂದರ್ಭದಲ್ಲಿ ಭಾಗವಹಿಸಿದ ಕ್ರೈ ಪ್ರೊಗ್ರಾಮ್ ಇಂಪ್ಲಿಮೆಂಟೇಷನ್ ಸದಸ್ಯ ನರಸಪ್ಪ ಡಿಂಗ್ರಿ, ತಾಯಪ್ಪ, ಹೆಗಸನಹಳ್ಳಿ ಶಾಲೆಯ ಪ್ರೌಢ ಶಾಲೆಯ ಮುಖ್ಯ ಉಪಾಧ್ಯಾಯ ಅಮಿತ್, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ರಾಮಣ್ಣ ಎನ್ ಗಣೇಕಲ್, ಶೋಭಾ ಮಲ್ಲೇಶ್, ಶರಣಬಸವ, ಶಶಿಕಲಾ, ಅಮರಮ್ಮ, ಲಲಿತಾ, ಸಂಜುಮೂರ್ತಿ, ಈರಮ್ಮ, ಮಲ್ಲಯ್ಯ, ಖಾನಾಪುರ ಸಂಪನ್ಮೂಲ ಕೇಂದ್ರದ ಎಲ್ಲ ಶಿಕ್ಷಕಿಯರು ಹಾಗೂ ಮಕ್ಕಳು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X