ತುಂಗಭದ್ರಾ ಎಡದಂಡೆಯ ಕಾಲುವೆಯ ಕಾವಲುಗಾರರಿಗೆ (ಗ್ಯಾಂಗ್ ಮ್ಯಾನ್) ಕಳೆದ 6 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಕೂಡಲೇ ವೇತನ ಪಾವತಿಸಬೇಕೆಂದು ಆಗ್ರಹಿಸಿ ರಾಯಚೂರಿನ ಸಿರವಾರ ತಾಲೂಕಿನ ನೀರಾವರಿ ಕಚೇರಿಯ ಮುಂದೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ತುಂಗಭದ್ರಾ ಎಡದಂಡೆ ನಾಲೆಯ ಹಂಗಾಮಿ ಗುತ್ತಿಗೆ ಕಾರ್ಮಿಕರಿಗೆ ವರ್ಷದ 8-10 ತಿಂಗಳು ಮಾತ್ರ ಕೆಲಸ ನೀಡುತ್ತಿದ್ದಾರೆ. ಉಳಿದ ತಿಂಗಳು ಬೇರೆ ಕೆಲಸ ಮಾಡಿಕೊಂಡು ಜೀವನ ನಡೆಸಬೇಕಾಗಿದೆ. ಉದ್ಯೋಗ ಭರವಸೆಯೂ ಇಲ್ಲ. ಮಾಡಿದ ಕೆಲಸಕ್ಕೆ ವೇತನವೂ ಪಾವತಿಯಾಗುತ್ತಿಲ್ಲ. ಹೀಗಾದರೆ ನಮ್ಮ ಜೀವನ ನಿರ್ವಹಣೆಯ ಕತೆಯೇನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಯಚೂರು | ಗುಡ್ಡದ ಮೇಲೆ ಬೆಂಕಿ; ಗಿಡಮರಗಳು ಭಸ್ಮ
ಈ ಸಂದರ್ಭದಲ್ಲಿ ಅಡವಿರಾವ್, ತಾಲೂಕು ಅಧ್ಯಕ್ಷ ಅಮರೇಗೌಡ ಲಕ್ಕಂದಿನ್ನಿ, ಮಾನ್ವಿ ಅಧ್ಯಕ್ಷ ರುಕ್ಕಪ್ಪ ಮಾನ್ವಿ, ಕವಿತಾಳ ಅಧ್ಯಕ್ಷ ಶರಣಪ್ಪ ಗೌಡ ಕವಿತಾಳ, ಕೊಟ್ಟೆಕಲ್ ಅದ್ಯಕ್ಷ ರಾಮಣ್ಣ ಪೋತ್ನಾಳ, ವಿರೇಶ ದೊರೆ, ವೆಂಕಟೇಶ, ಮಾರೆಪ್ಪ, ಮಾರೆಪ್ಪ ಹರವಿ, ಹಂಪಯ್ಯ ಗೊಲದಿನ್ನಿ, ಯಲ್ಲಪ್ಪ ಉಪಸ್ಥಿತರಿದ್ದರು.
