ಗಾಂಜಾ ಸೇವನೆ ಮಾಡಿದ ಆರೋಪದ ಮೇರೆಗೆ ಇಲ್ಲಿನ ಸದಾರ್ ಬಜಾರ್ ಠಾಣೆಯ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಪೆಟ್ಲಾಬುರ್ಜ್, ಗಂಗಾನಿವಾಸ ಹಾಗೂ ಕೇಂದ್ರ ಬಸ್ ನಿಲ್ದಾಣದ ಬಳಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ. ಪೆಟ್ಲಾಬುರ್ಜ್ ಬಳಿಯ ಎಂ.ಎನ್. ಮೆಡಿಕಲ್ ಶಾಪ್‌ನ ಹಿಂದೆ ಮಹ್ಮದ್ ಜೀಶನ್, ಕೇಂದ್ರ ಬಸ್ ನಿಲ್ದಾಣದ ಬಳಿ ಸೈಯದ್ ಹ್ಯಾರಿಸ್ ತನ್ನ ನಿಯಂತ್ರಣ ಕಳೆದುಕೊಂಡು ತೂರಾಡುತ್ತಿದ್ದನು. ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ದೇವಸ್ಥಾನ ಉದ್ಘಾಟನೆ ವೇಳೆ ಮುರಿದು ಬಿದ್ದ ಗರುಡ ಸ್ಥಂಭ ; ತಪ್ಪಿದ ಅನಾಹುತ
ನಂತರ ರಿಮ್ಸ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಮೂರು ಜನರ ವಿರುದ್ದ ಪ್ರತ್ಯೇಕವಾಗಿ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.