ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ರೈತರಿಗೆ ನೀಡಿರುವ ಯೋಜನೆಗಳು ಹಾಗೂ ಮಾಹಿತಿ ನೀಡಲು ಬಿಜೆಪಿ ರೈತ ಮೋರ್ಚಾದಿಂದ ಗ್ರಾಮ ಪರಿಕ್ರಮ ಯಾತ್ರೆ ನಡೆಸಲಾಗುತ್ತದೆ ಎಂದು ರಾಯಚೂರು ಜಿಲ್ಲಾಧ್ಯಕ್ಷ ಸಿದ್ದನಗೌಡ ನೆಲಹಾಳ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, “ಜಿಲ್ಲೆಯ ಐದು ಗ್ರಾಮಗಳಲ್ಲಿ ಗ್ರಾಮ ಪರಿಕ್ರಮ ಯಾತ್ರೆ ನಡೆಯಲಿದೆ. ರೈತರು ಹಾಗೂ ಕೃಷಿಕ ಮನೆ ಮನೆಗೆ ತೆರಳಿ ಕೇಂದ್ರ ಯೋಜನೆ ಕರಪತ್ರ ಹಾಗೂ ಮಾಹಿತಿಯನ್ನು ಒದಗಿಸಲಾಗುತ್ತದೆ. ಕೇಂದ್ರ ಸರ್ಕಾರ ನೈಸರ್ಗಿಕ ಕೃಷಿಗೆ ಒತ್ತು ನೀಡಿ 23 ಬೆಳಗಳಿಗೆ ಕನಿಷ್ಠ ಬೆಂಬಲ ಬೆಲೆ, ರಾಷ್ಟ್ರೀಯ ಫಸಲ್ ಭೀಮಾ ಯೋಜನೆಗೆ ₹48 ಕೋಟಿ ನೀಡಿ ಒಂದು ಲಕ್ಷ ಕೋಟಿ ಮಂದಿ ರೈತರಿಗೆ ನೇರ ನಗದು ನೀಡಿದೆ” ಎಂದರು.
“ಕಿಸಾನ್ ಸಮ್ಮಾನ್ ಯೋಜನೆಯಡಿ 11.8 ಕೋಟಿ ರೈತರಿಗೆ 2.8 ಲಕ್ಷ ಕೋಟಿ ನೀಡಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 2021ರಿಂದ 2023ವರೆಗೆ ₹93,000 ಕೋಟಿ ಒದಗಿಸಲಾಗಿದೆ. ಕೃಷಿ ರಫ್ತು 4 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ರೈತರಿಗೆ 23 ಕೋಟಿಯಷ್ಟು ಮಣ್ಣಿನ ಆರೋಗ್ಯ ಕಾರ್ಡ್ ಹಾಗೂ ರಸಗೊಬ್ಬರಗಳ ಸಬ್ಸಿಡಿಯನ್ನು ಶೇ.500ರಷ್ಟು ಏರಿಸಲಾಗಿದೆ. ನೀರಿನ ಉಳಿತಾಯ, ಡಿಜಿಟಲ್ ಪಾವತಿ, ಸ್ವಚ್ವತಾ ಅಭಿಯಾನ, ಮೇಡ್ ಇನ್ ಇಂಡಿಯಾ ಸೇರಿದಂತೆ 9 ಸಂಕಲ್ಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ಒತ್ತು ನೀಡುತ್ತಿರುವ ಕುರಿತು ಜನರಿಗೆ ಮಾಹಿತಿ ನೀಡಲಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಉತ್ತಮ ಭವಿಷ್ಯಕ್ಕಾಗಿ ವೃತ್ತಿಪರ ಕೌಶ್ಯಲಗಳ ಅಭಿವೃದ್ಧಿ ಅವಶ್ಯಕ: ಬಸವರಾಜ ಬೆಣ್ಣೆ
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನರೆಡ್ಡಿ, ಶಿವಲಿಂಗಯ್ಯ ಸ್ವಾಮಿ, ನೀಲಕಂಠಗೌಡ ಜಾಲಿಬೆಂಚಿ, ಮಲ್ಲಿಕಾರ್ಜುನ ಇದ್ದರು.
ವರದಿ : ಹಫೀಜುಲ್ಲ