ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಏ.13 ರಂದು ನಗರದ ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ವೈದ್ಯಕೀಯ ಸಂಘದ ಕಾರ್ಯದರ್ಶಿ ಶುಶೂತ್ ನಿಲೋಫರ್ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ರಾಜೀವ ಗಾಂಧಿ ಸೂಪರಸ್ಪೆಷಾಲಿಟಿ ಆಸ್ಪತ್ರೆ, ನವೋದಯ ವೈಧ್ಯಕೀಯ ಕಾಲೇಜು ಮತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆರೋಗ್ಯ ಶಿಬಿರ ನಡೆಯಲಿದೆ ಎಂದರು.
ಈ ಸುದ್ಡಿ ಓದಿದ್ದೀರಾ? ರಾಯಚೂರು | ಸಿಡಿಲು ಬಡಿದು ಕುರಿಗಾಯಿ ಸಾವು
ಸಾಮಾನ್ಯ ಆರೋಗ್ಯ, ಶಸ್ತ್ರ ಚಿಕಿತ್ಸಾ, ಇಸಿಜಿ, ಇಕೋ ತಪಾಸಣೆ, ಮೂಳೆ, ಕೀಲು ಚಿಕಿತ್ಸೆ, ನೇತ್ರ, ಮನೋವೈದ್ಯ, ಚರ್ಮರೋಗ, ಕಿವಿ,ಮೂಗು, ಗಂಟಲು, ಮಕ್ಕಳ ತಪಾಸಣೆ ಮೂತ್ರ, ಮೂತ್ರಪಿಂಡ, ಹೃದಯ ರೋಗ, ನರರೋಗ, ಪಾಸ್ಟೀಕ್ ಶಸ್ತ್ರ ಚಿಕಿತ್ಸೆ ವಿಭಾಗಗಳ ವೈದ್ಯರು ತಪಾಸಣಡೆ ನಡೆಸಲಿದ್ದಾರೆ. ಅಗತ್ಯ ಬಿದ್ದರೆ ರಾಜೀವಗಾಂಧಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಉಚಿತವಾಗಿ ಔಷಧಿಯೂ ವಿತರಿಸಲಾಗುತ್ತದೆ. ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದು ತಪಾಸಣೆ ಪಡೆಯಬಹುದಾಗಿದೆ ಎಂದರು.
ವೈದ್ಯಕೀಯ ಸಂಘದ ಅಧ್ಯಕ್ಷ ಶ್ರೀಶೈಲ ಅಮರಖೇಡ್ ಮಾತನಾಡಿ ವೈಧ್ಯಕೀಯ ಸಂಘದಿಂದ ನಾಲ್ಕನೇ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ನಗರ ಎಲ್ಲಾ ವೈಧ್ಯರು, ವೈಧ್ಯಕೀಯ ಸಂಸ್ಥೆಗಳ ಸಹಕಾರದಿಂದ ಶಿಬಿರ ನಡೆಸಲಾಗುತ್ತದೆ. ಶಿಬಿರದಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಗೂ ತಪಾಸಣೆ, ಅಗತ್ಯ ಬಿದ್ದರೆ ಶಸ್ತ್ರ ಚಿಕಿತ್ಸೆ ಒದಗಿಸಲಾಗುತ್ತದೆ. ಸಾರ್ವಜನಿಕರು ಸದುಪಯೋಗ ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಐಎಂಎ ಪದಾಧಿಕಾರಿಗಳಾದ ಡಾ. ಶ್ರೀಧರ ವೈಟ್ಲ, ಡಾ.ರಾಘವೇಂದ್ರ. ಎಸ್, ಡಾ.ದೀಪಶ್ರೀ, ಡಾ.ರಾಮನಗೌಡ ಇದ್ದರು.