ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ನಗರದ ಹಾಷ್ಮೀಯಾ ಕಂಪೌಂಡನಲ್ಲಿ ಸುಮಾರು ವರ್ಷಗಳಿಂದ ವಾಸವಾಗಿದ್ದ ನಿವಾಸಿಗಳನ್ನು ಕಾನೂನು ಬಾಹಿರವಾಗಿ ಏಕಾಏಕಿ ಜೆಸಿಬಿ ಮೂಲಕ ಮನೆಗಳನ್ನು ತೆರವುಗೊಳಿಸಿದ್ದು ಖಂಡನೀಯ ಎ ಸಿ ವಿರುದ್ದ ನ್ಯಾಯಾಂಗ ನಿಂದನೆ ದೂರು ಎಂದು ನಿವಾಸಿಗಳ ಪರವಾಗಿ ರೋನಾಲ್ಡ್ ಸನ್ನಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಮೇ.21 ರಂದು ಯಾವುದೇ ನೋಟಿಸ್ ನೀಡದೇ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ತಹಸೀಲ್ದಾರರು ಪಂಚನಾಮೆ ಮಾಡದೇ ನೋಟಿಸ್ ಸಹ ನೀಡದೇ ವರದಿ ನೀಡಿದ್ದಾರೆ.ವಕ್ಫ ಟ್ರಿಬ್ಯುನಲ್ ಸಹಾಯಕ ಆಯುಕ್ತರನ್ನು ತೆರವು ಅಧಿಕಾರಿಯೆಂದು ನೇಮಿಸಿದೆ ಹೊರತು ಜೆಸಿಬಿಗಳ ಮೂಲಕ ಮನೆಗಳನ್ನು ಕೆಡವಿ ಹಾಕಲು ಆದೇಶ ನೀಡಿಲ್ಲ.ಅಲ್ಲಿಯರುವ ನಿವಾಸಿಗಳ ಮನೆಗಳನ್ನು ಕೆಡವಿ ಹಾಕಲು ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಿದರು?
35 ರಿಂದ 40 ವರ್ಷಗಳಿಂದ ವಾಸ ಮಾಡುತ್ತಿದ್ದ ಅಲ್ಲಿಯ ನಿವಾಸಿಗಳೊಂದಿಗೆ ಕೆಟ್ಟದಾಗಿ ನಡೆದುಕೊಳ್ಳಲಾಗಿದೆ.ಸಹಾಯಕ ಆಯುಕ್ತರ ವಿರುದ್ದ ನ್ಯಾಯಾಂಗ ನಿಂದನೆ ದೂರು ದಾಖಲಿಸುವದಾಗಿ ನಿವಾಸಿಗಳಿಗೆ ತಿಳಿಸಿದರು.ವಕ್ಫ ಆಸ್ತಿಯ ಕುರಿತು ವಕ್ಫ ಟ್ರಿಬ್ಯುನಲ್ ತಡೆ ನೀಡಿತ್ತು. ಆದೇಶವನ್ನು ಸಹ ಸಹಾಯಕ ಆಯುಕ್ತರು ಪರಿಗಣಿಸಿಲ್ಲ. ಈ ಹಿಂದೆ ಹೈಕೋರ್ಟ ನೀಡಿದ್ದ ತೀರ್ಪಿನ ಅನ್ವಯ ಅಲ್ಲಿಯ ನಿವಾಸಿಗಳು ಬಾಡಿಗೆ ಸಹ ಪಾವತಿಸಿದ್ದಾರೆ ಎಂದರು.
ಮಹಾನಗರಪಾಲಿಕೆ ಸಹ ನೋಟಿಸ್ ನೀಡಬೇಕಿತ್ತು. ಸಾರ್ವಜನಿಕವಾಗಿ ಪ್ರಕಟಿಸಿ ತೆರವಿಗೆ ಮುಂದಾಗಬೇಕಿತ್ತು. ಏಕಾಏಕಿ ಯಾರದೋ ಪ್ರಚೋದನೆಯಿಂದ ಮನೆಗಳನ್ನು ಕೆಡವಲಾಗಿದೆ. ಬಡ ಕುಟುಂಬಗಳಿಗೆ ಕನಿಷ್ಟ ಪರ್ಯಾಯ ವ್ಯವಸ್ಥೆ ಮಾಡದೇ ಇರುವದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ.ಸರ್ವೆ ಸಂಖ್ಯೆ 1479 ರಲ್ಲಿ ಒಂಬತ್ತು ಭಾಗಗಳಿದ್ದು ಎಲ್ಲಿಯು ವಕ್ಫ ಆಸ್ತಿ ಎಂದು ಪಹಣಿಯಲ್ಲಿ ನಮೂದಾಗಿಲ್ಲ.ಸರ್ಕಾರಿ ಜಾಗ ಎಂದಿದ್ದು ವಕ್ಫ ಆಸ್ತಿಯೇ ಅಲ್ಲ. ಆದರೂ ತೆರವುಗೊಳಿಸಿರುವದು ಕಾನೂನು ಬಾಹಿರವಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಾಣಂತಿ ಸಾವು; ಆಸ್ಪತ್ರೆಗೆ ಕಲ್ಲು ತೂರಾಟ
ಹಿಂದಿನ ಸರ್ಕಾರದ ಅವಧಿಯಲ್ಲಿ ವಕ್ಫ ಅಧಿಕಾರಿಗಳು, ನಿವಾಸಿಗಳೊಂದಿಗೆ ಸಭೆ ನಡೆದು ಎರಡು ಅಂತಸ್ತಿನ ಮನೆ ನಿರ್ಮಾಣ ಮಾಡಿ ಎರಡನೇ ಅಂತಸ್ತಿನಲ್ಲಿ ಮನೆ ನಿರ್ಮಿಸುವ ಒಪ್ಪಂದವಾಗಿತ್ತು. ಆದರೆ ವಕ್ಫ ಅಧಿಕಾರಿಗಳೇತೆರವಿಗೆ ಮುಂದಾಗಿರುವ ಹಿಂದಿನ ಷಡ್ಯಂತ್ರವೇನು ಎಂದು ಪ್ರಶ್ನಿಸಿದರು.ನಿವಾಸಿಗಳಿಗೆ ಆಗಿರುವ ಆರ್ಥಿಕ ನಷ್ಟವನ್ನು ಜಿಲ್ಲಾಡಳಿತ ಭರ್ತಿಮಾಡಿ ಅಲ್ಲಿಯೇ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ನಿವಾಸಿಗಳ ನಿಯೋಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಸಹಾಯಕ ಆಯುಕ್ತರು ಕಾಂಗ್ರೆಸ್ ನಾಯಕರೊಬ್ಬರ ಪ್ರಚೋದನೆಯಿಂದ ತೆರವಿಗೆ ಮುಂದಾಗಿದ್ದಾರೆ. ಸೂಕ್ತ ತನಿಖೆ ನಡೆದರೆ ತೆರವಿಗೆ ಕಾರಣವಾಗಿರುವ ಯಾರು ಎಂಬುದು ಗೊತ್ತಾಗುತದೆ. ಸೂಕ್ತ ದಾಖಲೆಗಳೊಂದಿಗೆ ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವದಾಗಿ ಹೇಳಿದರು. ರಾಜಕೀಯ ವ್ಯಕ್ತಿಯೊಬ್ಬರ ಪ್ರಚೋದನೆಯಿಂದ ನಿವಾಸಿಗಳನ್ನು ಅತಂತ್ರಗೊಳಿಸಿರುವ ಸಹಾಯಕ ಆಯುಕ್ತರ ವಿರುದ್ದ ಕಾನೂನು ಕ್ರಮ ಕೈಗೊಂಡು ಅಮಾನತ್‌ಗೊಳಿಸಬೇಕು. ಇಲ್ಲದೇ ಹೋದಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲಿಸುವದಾಗಿ ಹೇಳಿದರು.
ಈ ಸಂದರ್ಬದಲ್ಲಿ ನ್ಯಾಯವಾದಿ ಸಲೀಂ, ಜನಾರ್ಧನ ಹಳ್ಳಿಬೆಂಚಿ, ಜಾನವಿ, ನಯಿಮುದ್ದೀನ್, ಲತಾಬಾಯಿ ಸೇರಿ ಅನೇಕರಿದ್ದರು.