ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರವಿಹಾಳ ಅವರ ಪುತ್ರ ಮತ್ತು ಸೋದರ ಕಾಡು ಮೊಲಗಳ ಬೇಟೆಯಾಡಿದ್ದಲ್ಲದೇ ಮಾರಕಾಸ್ತ್ರ ಹಿಡಿದು ಬೀದಿಯಲ್ಲಿ ವಾದ್ಯಗಳ ಸಹಿತ ಕ್ರೌರ್ಯ ಮೆರೆದಿರುವ ರಕ್ಕಸೀಯ ಘಟನೆ ಮಸ್ಕಿಯಲ್ಲಿ ನಡೆದಿದೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಂಕರಲಿಂಗೇಶ್ವರ ಜಾತ್ರೆಯಲ್ಲಿ ಮೊಲ ಬೇಟೆಯಾಡಿದ್ದ ತುರುವೀಹಾಳ್ ಅವರ ಸೋದರ ಮತ್ತು ಪುತ್ರ ಈ ಕೃತ್ಯವನ್ನೆಸಗಿದ್ದಾರೆ. ಅವರ ಕೃತ್ಯಕ್ಕೆ ಸುತ್ತಲಿರುವ ಜನ ಶಿಳ್ಳೆ ಕೇಕೆ ಹಾಕುತ್ತ ಪ್ರಚಂಡ ಜಯಕಾರ ಕೂಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಗೊಗೇರಿ ಗ್ರಾಮದಲ್ಲಿ ರಂಜಾನ್ ಹಬ್ಬ ಸಂಭ್ರಮದ ಆಚರಣೆ
ಮಹಾನ್ ಸಾಧನೆ ಮಾಡಿರುವವರಂತೆ ವಾದ್ಯಗಳ ಸಹಿತ ರಕ್ತಸಿಕ್ತ ಮೊಲಗಳ ಜತೆಗೆ ಮೆರವಣಿಗೆ ಮಾಡಿಸಿಕೊಂಡಿರುವ ಶಾಸಕರ ಕುಟುಂಬಸ್ಥರ ವರ್ತನೆಗೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.