ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ₹1,342.90 ಕೋಟಿ ವ್ಯವಹಾರ ನಡೆಸಿ ಇತಿಹಾಸ ನಿರ್ಮಿಸಿದೆ. ರಾಜ್ಯದ ಏಕೈಕ ಚಿನ್ನದ ಗಣಿಯಾದ ಹಟ್ಟಿ ಚಿನ್ನದ ಗಣಿ ಕಂಪನಿ ನಿರಂತರ ಸಾಧನೆಯ ಮೂಲಕ ತನ್ನ ದಾಖಲೆಗೆ ಮತ್ತೊಂದು ಮೈಲುಗಲ್ಲು ಸೇರಿಸಿಕೊಂಡಿದೆ.
“ಕಳೆದ ವರ್ಷಕ್ಕೆ ಹೋಲಿಸಿದರೆ 300 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸಲಾಗಿದೆ. ತೆರಿಗೆ, ರಾಯಲ್ಟಿ ಪಾವತಿಸಿದ ನಂತರ 444 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದು ಗಣಿ ಕಂಪನಿಯ ಅತ್ಯಧಿಕ ಲಾಭವಾಗಿದೆ.
ವಾರ್ಷಿಕ 10 ರಿಂದ 11 ಲಕ್ಷ ಟನ್ ಅದಿರು ಉತ್ಪಾದಿಸಲಾಗುತ್ತದೆ. ಈ ವರ್ಷ 2.8 ಟನ್‌ನಿಂದ 3 ಟನ್ ಚಿನ್ನ ಉತ್ಪಾದಿಸುವ ಹಾಗೂ 3,000 ಕೋಟಿ ರೂ.ಗೂ ಅಧಿಕ ವಾರ್ಷಿಕ ವಹಿವಾಟು ಗುರಿಯಿದೆ. ಪ್ರಸಕ್ತ ವರ್ಷ 1700 ಕೆ.ಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಹಟ್ಟಿಚಿನ್ನದಗಣಿ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಾ ಆರ್. ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅತ್ಯಾಚಾರ ಪ್ರಕರಣ : ಅಪರಾಧಿಗೆ ಜೀವಾವಧಿ ಶಿಕ್ಷೆ
ಉತ್ಪಾದನೆ ಹೆಚ್ಚಳ: 6 ಮೀಟರ್ ಸುತ್ತಳತೆ ಹಾಗೂ 900 ಮೀಟರ್ ಆಳದ ನ್ಯೂ ಸರ್ಕ್ಯೂಲರ್ ಶಾಫ್ಟ್ ಹಾಗೂ ಪ್ರತಿ ಸಾಲಿನಲ್ಲಿ 6,83,701 ಟನ್ ಅದಿರು ಸಂಸ್ಕರಿಸಿ, 1606.30 ಕೆ.ಜಿ. ಚಿನ್ನ ಉತ್ಪಾದಿಸಲಾಗಿತ್ತು. ಹಿಂದಿನ ಆರ್ಥಿಕ ವರ್ಷಕ್ಕೆ ಹೊಲಿಸಿದರೆ ಶೇ.4.81ರಷ್ಟು ಕಡಿಮೆ ಅದಿರು ಉತ್ಪಾದಿಸಲಾಗಿದೆ. ಚಿನ್ನದ ಉತ್ಪಾದನೆಯಲ್ಲಿ ಶೇ.3.43ರಷ್ಟು ಹೆಚ್ಚಾಗಿದೆ. ಗಂಟೆಗೆ 50 ಟನ್ ಅದಿರು ಸಂಸ್ಕರಣೆಯ ಬಾಲ್ ಮಿಲ್‌ನಿಂದಾಗಿ ಅಧಿಕ ಚಿನ್ನ ಉತ್ಪಾದಿಸಲಾಗಿದೆ. 2024-25 ಹೆಚ್ಚಿನ ಉತ್ಪಾದನೆ ಜತೆಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮ ರೂಪಿಸಲಾಗಿದ್ದು, ಅವೆಲ್ಲವೂ ಕಾರ್ಯರೂಪಕ್ಕೆ ಬರಲಿವೆ ಎಂದು ತಿಳಿಸಿದರು.
