ರಾಯಚೂರು ಜಿಲ್ಲೆಯ ಹಲವು ತಾಲೂಕಿನ ಪಟ್ಟಣ ಪ್ರದೇಶಕ್ಕಿಂತಲೂ ಹಳ್ಳಿ ಹಳ್ಳಿಯಲ್ಲೂ ಕದ್ದು ಮುಚ್ಚಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಲಿಂಗಸೂಗೂರು ತಾಲೂಕಿನ ಹಲ್ಕಾವಟಗಿ ಗ್ರಾಮದ ಸುತ್ತ ಮುತ್ತ ಸಣ್ಣ ಪುಟ್ಟ ಹಳ್ಳಿಗಳಲ್ಲಿ ರಾಜಾರೋಷವಾಗಿ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಗ್ರಾಮೀಣ ಭಾಗದ ಕೆಲವು ಸಣ್ಣ ಪುಟ್ಟ ಅಂಗಡಿಗಳು, ಹೋಟೆಲ್‌ಗಳು, ಕೆಲವರ ಮನೆಗಳಲ್ಲೂ ಕೂಡ ಮದ್ಯ ಮಾರಾಟ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಅಕ್ರಮ ಮದ್ಯವನ್ನು ಬಾರ್‌ಗಳಿಗಿಂತಲೂ ಮೂರುಪಟ್ಟು ಹೆಚ್ಚು ದರದಲ್ಲಿ ಮಾರಾಟ ಮಾಡುತ್ತಾರೆ ಎಂದು ಗ್ರಾಮದ ಜನರು ದೂರು ನೀಡಿದ್ದಾರೆ.
ಮದ್ಯ ಮಾರಾಟಕ್ಕೆ ಕೊನೆಯಿಲ್ಲ. ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ ಗಮನಕ್ಕೆ ತಂದರು ಕೂಡ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಲ್ಕಾವಟಗಿ ಗ್ರಾಮದ ನಿವಾಸಿ ಪರಶುರಾಮ ಮಾತನಾಡಿ, ಮದ್ಯ ಮಾರಾಟ ಹಗಲು ರಾತ್ರಿ ಎಗ್ಗಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ಜನರು ಆರ್ಥಿಕ ಸಂಕಷ್ಟದಲ್ಲಿದ್ದರೂ ಗ್ರಾಮಿಣ ಭಾಗದ ಜನರು, ಯುವಕರು ಗ್ರಾಮದಲ್ಲಿಯೇ ಸುಲಭವಾಗಿ ಸಿಗುವ ಮದ್ಯ ಸೇವನೆಯಿಂದ ಚಟಕ್ಕೆ ಬಿದ್ದಿದ್ದಾರೆ ಎಂದು ಹೇಳಿದರು.
ಇದನ್ನು ಓದಿದ್ದಿರಾ? ರಾಯಚೂರು | ಹೃದಯಾಘಾತದಿಂದ ಕರ್ತವ್ಯ ನಿರತ ಪೌರ ಕಾರ್ಮಿಕ ಸಾವು
ಸಣ್ಣ ಪುಟ್ಟ ಅಂಗಡಿಗಳಲ್ಲಿ ಮಾರಾಟ ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಿದೆ. ಕುಡಿಯುವ ನೀರಿನ ಪಕ್ಕದಲ್ಲಿ ರಾಶಿಯಾಗಿ ಮದ್ಯದ ಬಾಟಲಿ ,ಡಬ್ಬಿಗಳನ್ನು ಎಸೆದಿದ್ದಾರೆ ಎಂದರು.
ಈ ಕುರಿತು ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಸೂಕ್ತವಾಗಿ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಹಲ್ಕಾವಟಗಿ ಗ್ರಾಮದ ಜನರು ಆಗ್ರಹಿಸಿದ್ದಾರೆ.

ಇದು ಎಲ್ಲ ಹಳ್ಳಿಗಳಲ್ಲಿ ನಡೆಯುತ್ತಿದೆ ಸುಮ್ಮನೆ ಪೇಪರ್ ಹಾಕಿದೂರು ಇದು ವಾಸ್ತವ ಚಿತ್ರಣ ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
S ಬ್ರೋ ನೀವು ಹೇಳಿದ್ದು ಸರಿ ಲಂಚ ತಿನ್ನುವ ನಾಲಾಯಕ್ ಅಧಿಕಾರಿಗಳು ಇರೋವರೆಗೂ ಇದನ್ನ ತಡೆಯೋಕೇ ಯಾರಿಂದಾನು ಸಾಧ್ಯ ಇಲ್ಲಾ
ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು ಹಾಗೆ ಎಲ್ಲ ಸಣ್ಣ ಪುಟ್ಟ ಕ್ಯಾಂಟೀನ್ ಸಣ್ಣ ಚಿಲ್ಲರೆ ಅಂಗಡಿ ಮತ್ತೆ ಕೆಲವು ಮನೆಗಳಲ್ಲೂ ಅಕ್ರಮ ಮದ್ಯ ಮಾರಾಟ ಮಾಡುತ್ತಾರೆ ಅಂತವರ ವಿರುದ್ಧನು ಪ್ರಕರಣ ದಾಖಲಿಸಿ ಶೀಸ್ತು ಕ್ರಮ ಜರುಗಿಸಬೇಕು ಹಾಗೂ ಅವರಿಗೆ ಮಾರಾಟ ಮಾಡಲು ಬಾಕ್ಸ್ ಗಟ್ಟಲೆ ಮದ್ಯ ಕೊಡುವ ಎಲ್ಲ ಪರವಾನಗಿ ಹೊಂದಿರುವ ಅಂಗಡಿಗಳ ವಿರುದ್ಧನು ಪ್ರಕರಣ ದಾಖಲಿಸಿ ಯಾರು ಅಕ್ರಮ ಮದ್ಯ ಮಾಡಲು ಸಪ್ಲೈ ಮಾಡುತ್ತಾರೋ ಅಂತ ಅಂಗಡಿಗಳ ಲೈಸೆನ್ಸ್ ಕ್ಯಾನ್ಸಲ್ ಮಾಡಬೇಕು ಇಲ್ಲಿ ಕೆಲವು ಲಂಚ ತಿನ್ನುವ ಅಧಿಕಾರಿಗಳೇ ಇದರಲ್ಲಿ ಭಾಗಿಯಾಗಿರುವುದರಿಂದ ಇದನ್ನ ನಿಲ್ಲಿಸುತ್ತಾರೆ ಅನ್ನೋದು ಭ್ರಮೆ ಯಾತ ರಾಜ ತತ ಪ್ರಜಾ