ರಾಯಚೂರು ಶಾಖೋತ್ಪನ್ನ ಕೇಂದ್ರದಿಂದ ಸಾಗಾಣೆಯಾಗುತ್ತಿರುವ ಹಾರುಬೂದಿಯನ್ನು ಓವರ್ ಲೋಡ್ ಮಾಡಿ ಸಾಗಾಣೆ ಮಾಡುತ್ತಿರುವ ವಾಹನಗಳ ಪರವಾನಗಿ ರದ್ದುಗೊಳಿಸುವಂತೆ ಒತ್ತಾಯಿಸಿ ಮೂಲನಿವಾಸಿ ಡಾ. ಅಂಬೇಡ್ಕರ್ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ನಿತ್ಯವೂ 700ಕ್ಕೂ ಅಧಿಕ ಲಾರಿಗಳು ಹಾರುಬೂದಿ ಸಾಗಿಸುತ್ತಿದ್ದು, 28.85ಟನ್ ಸಾಗಿಸುವ ಬದಲಾಗಿ 70ಟನ್‌ನಷ್ಟು ಹಾರುಬೂದಿ ಸಾಗಾಣೆ ಮಾಡಲಾಗುತ್ತಿದೆ. ಪರವಾನಿಗೆಯಿಲ್ಲದೆ ಓವರ್ ಲೋಡ್ ಸಾಗಾಣೆಯಿಂದ ರಸ್ತೆಗಗಳು ಹಾಳಾಗುವುದರ ಜೊತೆಗೆ ಅಪಘಾತ ಹೆಚ್ಚಳವಾಗುವ ಸಾಧ್ಯತೆಗಳಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರವಾನಿಗೆಯಿಲ್ಲದೆ ಓವರ್ ಲೋಡ್ ಸಾಗಾಣೆ ಮಾಡುತ್ತಿರುವ ವಾಹನ ಚಾಲಕರು ಮತ್ತು ಮಾಲೀಕರ ವಿರುದ್ಧ ಪೊಲೀಸ್, ಪರಿಸರ, ಸಾರಿಗೆ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವರ್ಗಾವಣೆಯಾಗಿರುವ ಶಿಕ್ಷಕರನ್ನು ಬಿಡುಗಡೆಗೊಳಿಸದಂತೆ ಎಸ್‌ಎಫ್‌ಐ ಆಗ್ರಹ
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಭರತಕುಮಾರ, ಎನ್ ಸುಶೀಲ್ ಕುಮಾರ್, ಹನುಮೇಶ ಕೊಲಮಿ, ಎಂ ಡಿ ಹಾಜಿ, ವೀರೇಶ, ರಾಜು ಅಸ್ಕಿಹಾಳ, ತಿಮ್ಮಪ್ಪ, ಕಿಶೋರಕುಮಾರ, ಹನುಮಂತ, ವೆಂಕಟೇಶ ಸೇರಿದಂತೆ ಬಹುತೇಕರು ಇದ್ದರು.
ಸಿಟಿಜನ್ ಜರ್ನಲಿಸ್ಟ್ : ಹಫೀಜುಲ್ಲ