ಪ್ರವಾದಿ ಮಹಮ್ಮದ್ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ(SDPI)ದಿಂದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
“ಬಿಜೆಪಿ ಶಾಸಕ ಯತ್ನಾಳ್, ಮುಸ್ಲಿಂ ಸಮುದಾಯದ ವಿರುದ್ಧ ಅನೇಕ ಬಾರಿ ಅವಹೇಳನಕಾರಿ ಹೇಳಿಕೆ ನೀಡಿ, ಪ್ರವಾದಿಯವರನ್ನು ನಿಂದಿಸುತ್ತಲೇ ಇರುತ್ತಾರೆ. ನಾವು ಗೌರವಿಸುವ ಪ್ರವಾದಿಯವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿ ಸಮುದಾಯಕ್ಕೆ ಧಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಯತ್ನಾಳ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಕೂಡಲೇ ಅವರನ್ನು ಬಂಧಿಸಬೇಕು” ಎಂದು ಒತ್ತಾಯಿಸಿದರು.
“ಯತ್ನಾಳ ಅವರು ಒಂದು ಸಮುದಾಯದ ವಿರುದ್ಧ ಪದೇ ಪದೆ ನಾಲಿಗೆ ಹರಿಬಿಟ್ಟು ಕೋಮು ಪ್ರಚೋದನೆಗೆ ಉಂಟುಮಾಡುವ ಸಾಧ್ಯತೆ ಇದೆ. ಹಾಗಾಗಿ ಬಜರಂಗದಳ ಹಾಗೂ ಶ್ರೀರಾಮಸೇನೆ ಏಪ್ರಿಲ್ 13ರಂದು ಲಿಂಗಸುಗೂರು ತಾಲೂಕಿನಲ್ಲಿ ಆಯೋಜಿಸಿದ ರಾಮನವಮಿ ಜಯಂತಿಗೆ ಆಗಮಿಸುತ್ತಿರುವ ಶಾಸಕ ಬಸನಗೌಡ್ ಯತ್ನಾಳ ಹಾಗೂ ಪ್ರಮೋದ್ ಮುತಾಲಿಕ್ ಅವರ ಅನುಮತಿ ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ರಾಜ್ಯದಲ್ಲಿ ಜಾತಿ ಜನಗಣತಿ ಸಮೀಕ್ಷೆ ವರದಿ ಜಾರಿಗೊಳ್ಳಲಿದೆ: ಎಚ್ ಕಾಂತರಾಜ್
“ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಲಿಂಗಸುಗೂರು ತಾಲೂಕಿಗೆ ಪ್ರಚೋದನಾತ್ಮಕ ಹೇಳಿಕೆ ನೀಡಿ ಕೋಮುಗಲಭೆ ಸಂಭವಿಸಿದರೆ ಪೊಲೀಸ್ ಇಲಾಖೆಯೇ ನೇರ ಹೊಣೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ತೌಸೀಫ್ ಅಹ್ಮದ್, ಸೈಯದ್ ಇರ್ಫಾನ್ ಮತ್ತು ಶೇಕ್ ದಾವೂದ್ ಇದ್ದರು.