ಯುಗಾದಿ ಹಬ್ಬದ ಅಂಗವಾಗಿ ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆ ಭೀಮನ ಕೊಳ ಬಳಿ ಕಾಡಿನ ಮಧ್ಯೆ ಜರುಗಿದೆ. ಕಲ್ಲೂರು ಗ್ರಾಮ ನಿವಾಸಿ ಬಸವರಾಜ್ ಯಾದವ್ (40) ಮೃತ ದುರ್ದೈವಿ.
ಶ್ರೀ ಶೈಲಕ್ಕೆ ವೆಂಕಟಪೂರುನಿಂದ ಪಾದಯಾತ್ರೆ ಹಮ್ಮಿಕೊಂಡಾಗ ಏಕಾಏಕಿ ಹೃದಯಾಘಾತ ಕಾಣಿಸಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು |ಮಹಿಳೆಯರ ಮೇಲೆ ಕೊಲೆ,ಅತ್ಯಾಚಾರ ಕಡಿವಾಣಕ್ಕೆ ದೆಹಲಿಗೆ ಕಾಲ್ನಡಿಗೆ ಜಾಥಾ ; ಪ್ರಧಾನಿಗೆ ಮನವಿ
ಕಲ್ಲೂರ ಗ್ರಾಮದಿಂದ ಬುದುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ವಾಹನವೊಂದರಲ್ಲಿ 14 ಜನ ಶ್ರೀ ಶೈಲಕ್ಕೆ ಹೊರಟಿದ್ದರು. ಪಾರ್ಥಿವ ಶರೀರ ಇಂದು ಕಲ್ಲೂರಿಗೆ ತಲುಪಲಿದ್ದು ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ ಜರುಗಲಿದೆ.