ಕುಟುಂಬ ಸಮೇತ ಜಾತ್ರೆಗೆ ಬಂದಿದ್ದ ಮಕ್ಕಳಿಬ್ಬರು ಕಾಲುವೆಯಲ್ಲಿ ಬಿದ್ದು ನೀರು ಪಾಲಾದ ಘಟನೆ ರಾಯಚೂರು ತಾಲ್ಲೂಕು ಗಾಣದಾಳ ಗ್ರಾಮದ ರಾಜಲಬಂಡಾ ಕಾಲುವೆಯಲ್ಲಿ ನಡೆದಿದೆ.
ಅಂಜಲಿ (17) , ರಘು (14) ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಮಕ್ಕಳು ಎಂದು ಗುರುತಿಸಲಾಗಿದೆ.ಅಂಜಲಿ ತೆಲಂಗಾಣ ರಾಜ್ಯದ ಗದ್ವಾಲ್ ನಿವಾಸಿ ಹಾಗೂ ರಘು ಆಂಧ್ರಪ್ರದೇಶದ ಎಮ್ಮಿಗನೂರಿನ ನಿವಾಸಿ ಎನ್ನಲಾಗಿದೆ.
ಈ ಸುದ್ಡಿ ಓದಿದ್ದೀರಾ? ರಾಯಚೂರು | ಮದುವೆ ಮಂಟಪವೇ ಬಾಲವಾಡಿ; ಅಧಿಕಾರಿಗಳಿಗೆ ಬೇಡವಾದ ಚಿಣ್ಣರ ಕೇಂದ್ರ
ಗಾಣದಾಳ ಗ್ರಾಮದ ಪಂಚಮುಖಿ ಆಂಜನೇಯ ಜಾತ್ರೆಗೆ ಬಂದಿದ್ದ ಮಕ್ಕಳಿಬ್ಬರು ಸಂಜೆ 3.30 ಗಂಟೆ ಸುಮಾರಿಗೆ ಕಾಲುವೆಯಲ್ಲಿ ಆಟವಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಹೇಳಲಾಗಿದೆ.
ಘಟನೆಯ ಬಳಿಕ ಅಗ್ನಿಶಾಮಕದಳ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಕ್ಕಳ ಶೋಧ ನಡೆಸಿದ್ದಾರೆ.ಇನ್ನೂ ಮಕ್ಕಳು ಪತ್ತೆಯಾಗಿಲ್ಲ ಹೇಳಲಾಗಿದೆ.
ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.