ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಿಎಸ್ಐ ವೆಂಕಟೇಶ ನಾಯಕ ಅವರ ವಿರುದ್ಧ ಕೆಲ ದಲಿತಪರ ಸಂಘಟನೆಗಳ ಮುಖಂಡರು ಆರೋಪಿದ್ದು ಸತ್ಯಕ್ಕೆ ದೂರವಾಗಿದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕರ ಹಿತ ರಕ್ಷಣಾ ಸಂಘದ ರಾಜ್ಯ ಸಂಸ್ಥಾಪಕ ಅಧ್ಯಕ್ಷ ವೈ.ಹನುಮಂತಪ್ಪ ನಾಯಕ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ʼಕೆಲವರು ಪತ್ರಿಕಾಗೋಷ್ಠಿ ನಡೆಸಿ ಪಿಎಸ್‌ಐ ವೆಂಕಟೇಶ ಅವರು ಅಸ್ಪೃಶ್ಯರ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪ ಸತ್ಯಕ್ಕೆ ದೂರವಾಗಿದೆʼ ಎಂದರು.
ʼಪಿಎಸ್‌ಐ ವೆಂಕಟೇಶ ನಾಯಕ ಓರ್ವ ದಕ್ಷ ಅಧಿಕಾರಿ, ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಜೂಜು, ಅಕ್ರಮ ಮದ್ಯ ಮಾರಾಟ, ಕೋಳಿ ಪಂದ್ಯಾವಳಿ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ಇದನ್ನು ಸಹಿಸದ ಕೆಲವರು ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಪ್ರಾಮಾಣಿಕ ಅಧಿಕಾರಿಯ ಮೇಲೆ ಆಧಾರ ರಹಿತ ಸುಳ್ಳು ಆರೋಪಗಳಿಗೆ ಮೇಲಾಧಿಕಾರಿಗಳು ಪಿಎಸ್‌ಐ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಪಹರಣವಾಗಿದ್ದ ಮಗು ತಾಯಿ ಮಡಿಲು ಸೇರಿತು !
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಮೇಶ್ ನಾಯಕ, ಹುಸೇನಪ್ಪ ನಾಯಕ, ರಂಗಪ್ಪ ನಾಯಕ ಇದ್ದರು.
