ಲಿಂಗಸೂಗೂರು ತಾಲ್ಲೂಕಿನ ಆನೆಹೊಸೂರು-ತೊರಲಬೆಂಚಿ ಗ್ರಾಮದಲ್ಲಿ ಪ್ರಾರಂಭಿಸಲು ಹೊರಟಿರುವ 132/11 ಕೆವಿ ವಿದ್ಯುತ್ ಉಪಕೇಂದ್ರವನ್ನು ತಾಲ್ಲೂಕಿನ ಸುಣಕಲ್ಲ ಗ್ರಾಮಕ್ಕೆ ಸ್ಥಳಾಂತರ ಮಾಡುತ್ತಿರುವುದು ಖಂಡನೀಯ,ಕೂಡಲೇ ಸ್ಥಳಾಂತರ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಸುಣಕಲ್ ಗ್ರಾಮದಿಂದ 3 ಕಿಲೋ ಮೀಟರ್ ರೋಡಲಬಂಡಾ ಯಕೆಪಿಯಲ್ಲಿ 110 ಕೆ ವಿ ಹಾಗೂ 7 ಕಿಲೋ ಮೀಟರ್ ಹಂತದ ಈಚನಾಳ ಗ್ರಾಮದಲ್ಲಿ 110 ಕೆ ವಿ ವಿದ್ಯುತ್ ವಿತರಣಾ ಕೇಂದ್ರಗಳಿವೆ.ಆದರೂ ಸಹ ಈ ವಿತರಣಾ ಕೇಂದ್ರ ಸ್ಥಳಾಂತರಿಸುತ್ತಿರುವುದು ಘೋರ್ ಅನ್ಯಾಯ ಎಂದು ಆಗ್ರಹಿಸಿದರು.
ಸುಣಕಲ್ಲ ಗ್ರಾಮದಲ್ಲಿರುವ ಖಾಸಗಿ ಸಕ್ಕರೆ ಕಾರ್ಖಾನೆ ಹಿತಕ್ಕಾಗಿ ಸಾವಿರಾರು ರೈತರಿಗೆ ವಂಚನೆ ಉದ್ದೇಶದಿಂದ ಸುಣಕಲ್ಲು ಗ್ರಾಮಕ್ಕೆ ಸ್ಥಳಾಂತರ ಮಾಡಲು ಹುನ್ನಾರ ನಡೆದಿದೆ. ವಿದ್ಯುತ್ ವಿತರಣಾ ಉಪಕೇಂದ್ರವನ್ನು ಆನೆಹೊಸೂರುದಲ್ಲಿ ಸ್ಥಾಪಿಸಬೇಕು ಒಂದು ವೇಳೆ ಸರ್ಕಾರ ಸುಣಕಲ್ಲ ಗ್ರಾಮಕ್ಕೆ ಸ್ಥಳಾಂತರ ಮಾಡಿದರೆ ಆರ್.ಬಿ.ಶುಗರ್ಸ್ ಸಕ್ಕರೆ ಕಾರ್ಖಾನೆ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಸ್ ನಿಲ್ಲಿಸಲು ವಿದ್ಯಾರ್ಥಿಗಳಿಂದ ಪ್ರತಿಭಟನೆ
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರಗೌಡ ಜಾಗಿರನಂದಿಹಾಳ, ಆನಂದ ಕುಂಬಾರ, ಲಕ್ಷ್ಮಣ, ಹನುಮಗೌಡ ಇನ್ನಿತರರು ಉಪಸ್ಥಿತರಿದ್ದರು.