ಛತ್ತೀಸಗಡದಲ್ಲಿ ಕ್ಯಾಥೋಲಿಕ್ ಕನ್ಯಾಸ್ತ್ರೀಯರ ಮೇಲೆ ನಡೆದ ಹಲ್ಲೆ ಹಾಗೂ ಕಾನೂನು ಬಾಹಿರವಾಗಿ ನಡೆಸಲಾದ ಬಂಧನ ಪ್ರಕರಣವನ್ನು ತೀವ್ರವಾಗಿ ಖಂಡಿಸಿ, ಮಸ್ಕಿ ನಗರದಲ್ಲಿ ಸೋಮವಾರ ಕ್ರೈಸ್ತ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿದರು.
ನಗರದ ಕೋರ್ಟ್ ಸರ್ಕಲ್‌ನಿಂದ ಆರಂಭಗೊಂಡ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿಯವರೆಗೆ ಕೈಯಲ್ಲಿ ಬಿತ್ತಿ ಪತ್ರಗಳನ್ನು ಹಿಡಿದು ಮೌನವಾಗಿ ಮರೆವಣಿಗೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಾಲಸ್ವಾಮಿ ಅವರು, ಕ್ಯಾಥೋಲಿಕ್ ಧರ್ಮಸಭೆಯ ಕನ್ಯಾಸ್ತ್ರೀಯರನ್ನು ಮಕ್ಕಳ ಸಾಗಾಟ ಮತ್ತು ಮತಾಂತರದಲ್ಲಿ ತೊಡಗಿರುವ ಧರ್ಮ ಪ್ರಚಾರಕರೆಂದು ಸುಳ್ಳು ಆರೋಪ ಹೊರಿಸಿ ಪೊಲೀಸ್ ಠಾಣೆಗೆ ದೂರು ನೀಡಿ ಬಂಧಿಸಿರುವುದು ಖಂಡನೀಯ ಎಂದರು.
ಪ್ರತಿಯೊಬ್ಬ ಪ್ರಜೆಗೂ ತಾನು ಇಚ್ಛಿಸಿದ ಧರ್ಮವನ್ನು ಆಚರಿಸಲು ಸಂವಿಧಾನ ಹಕ್ಕಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಯವರು ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಸಹಿಸದೆ, ಮನುವಾದಿ ನಿಲುವಿನಿಂದ ಉದ್ದೇಶಪೂರ್ವಕವಾಗಿ ಸಂಚು ರೂಪಿಸಿ ದಮನಕ್ಕೆ ಮುಂದಾಗುತ್ತಿದ್ದಾರೆ,” ಎಂದು ಆರೋಪಿಸಿದರು.

ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಅಹಿತಕರ ಘಟನೆಗಳು ನಡೆಯುತ್ತಿವೆ. ತಕ್ಷಣ ಆಯಾ ರಾಜ್ಯದ ಸರ್ಕಾರಗಳು ಸೂಕ್ತ ರಕ್ಷಣೆ ನೀಡಬೇಕು ಇಲ್ಲದಿದ್ದರೆ ರಾಜ್ಯದ ಸರ್ಕಾರವೇ ನೇರ ಹೊಣೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೈಕ್ – ಟಾಟಾಏಸಿ ಡಿಕ್ಕಿ : ಓರ್ವ ಸಾವು ,ನಾಲ್ವರಿಗೆ ಗಾಯ
ಈ ವೇಳೆ ರಾಜ್ಯ ಮಹಿಳಾ ಒಕ್ಕೂಟ ಮೌಕ್ಷಮ್ಮ, ಫಾದರ್ ಕ್ಸೇವಿಯರ, ಸುರೇಶ್ ಅಂತರಗಂಗಿ, ರಾಯಪ್ಪ, ಶಾಂಭವಿ, ಮರಿಯಮ್ಮ ಹೊಸಳ್ಳಿ, ಇನ್ನಿತರರು ಉಪಸ್ಥಿತರಿದ್ದರು.
