ನೂತನ ನವೀಕರಣ ಲೇಬರ್ ಕಾರ್ಡ್ ಬಿಡುಗಡೆ ಸೇರಿ ಇನ್ನಿತರ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಂಘದ ವತಿಯಿಂದ ಲಿಂಗಸೂಗೂರು ಕಾರ್ಮಿಕ ನಿರೀಕ್ಷಕ ಅಧಿಕಾರಿ ಶಾಂತಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಕಾರ್ಮಿಕರು ಸುಮಾರು ದಿನಗಳ ಹಿಂದೆ ಲೇಬರ್ ಕಾರ್ಡ್ ಗಾಗಿ ಅರ್ಜಿಗಳನ್ನು ಸಲ್ಲಿಸಲಾಗಿದ್ದು ಅವುಗಳನ್ನು ಬಿಡುಗಡೆ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ತಕ್ಷಣವೇ ನವೀಕರಣ ಲೇಬರ್ ಕಾರ್ಡ್ ಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರ ಸಹಾಯಧನಕ್ಕೆ ಹೆರಿಗೆ,ಮರಣ ಸೇರಿ ಇನ್ನಿತರ ಅರ್ಜಿಗಳನ್ನು ಸಲ್ಲಿಸಿದರು ಯಾವುದೇ ಪರಿಶೀಲನೆ ಮಾಡದೆ ಅಧಿಕಾರಿಗಳು ಕುಂಟುನೆಪ ಹೇಳಿ ಕಾರ್ಮಿಕರಿಗೆ ಸತಾಯಿಸುತ್ತಿದ್ದಾರೆ.ಅರ್ಜಿಗಳನ್ನು ಪರಿಶೀಲಿಸಿ ಸಹಾಯಧನ ನೀಡಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಡಿಲು ಬಡಿದು ಇಬ್ಬರು ಮಹಿಳೆಯರು ಗಂಭೀರ ಗಾಯ
ಕಟ್ಟಡ ಕಾರ್ಮಿಕರಿಗೆ ಉದ್ಯೋಗ ವೃತ್ತಿ ಮೇಲೆ ಕೂಡಲೇ ಕಿಟ್ ಗಳನ್ನು ವಿತರಣೆ ಮಾಡಬೇಕು ಹಾಗೂ ಬೇಡಿಕೆಗಳನ್ನು ಈಡೇರಿಸಬೇಕು.ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಕಾರ್ಮಿಕರ ಇಲಾಖೆ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಿಐಟಿಯು ಮುಖಂಡ ನಿಂಗಪ್ಪ ಎಂ ವೀರಾಪುರ್ , ಖಾಜಾ ಮೈನುದ್ದೀನ್ ಲಕ್ಷ್ಮಣ್ ಆಮಿದಿಹಾಳ, ದಾವುದ ,ಅಯ್ಯಪ್ಪ ಅಂಕುಶದೊಡ್ಡಿ ಇನ್ನಿತರರು ಹಾಜರಿದ್ದರು.