ರಾಯಚೂರು ನಗರದ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ನಕಲಿ ದಾಖಲೆ ಸೃಷ್ಠಿಸಿ ಭೂಮಿಯನ್ನು ಕಬಳಿಸಲು ಸಹಕಾರ ನೀಡಿದ ಆರೋಪ ಕೇಳಿಬಂದಿದೆ.
ರಾಯಚೂರು ತಾಲೂಕಿನ ಪೋತಗಲ್ ಗ್ರಾಮದ ಸರ್ವೆ ನಂ.172/3ರ 6ಎಕರೆ ಜಮೀನು ಗ್ರಾಮದ ಗೋವಿಂದಪ್ಪ ಎನ್ನುವವರ ಹೆಸರಿನಲ್ಲಿದ್ದು, ಅವರ ಮರಣದ ಬಳಿಕ ತಮ್ಮ ಪತ್ನಿ ಸುಶೀಲಮ್ಮ ಅವರ ಹೆಸರಿಗೆ ನೋಂದಣಿಯಾಗಿತ್ತು.
ಕಳೆದ 15 ವರ್ಷಗಳಿಂದ ಭೂಮಿ ಇದೆ. ಆದರೆ ಸುಶೀಲಮ್ಮ ಮೃತಪಟ್ಟಿದ್ದಾರೆ. ಅವರಿಗೆ ಮಕ್ಕಳಿಲ್ಲವೆಂದು ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ನಕಲಿ ದಾಖಲೆ ಸೃಷ್ಠಿಸಿ ಎಸ್ ಕೆ ನಾಗರೆಡ್ಡಿ ಎನ್ನುವವರ ಹೆಸರಿಗೆ ನೋಂದಣಿ ಮಾಡಿದ್ದಾರೆ.
“ಈ ಬಗ್ಗೆ ಮಾಹಿತಿ ತಿಳಿದುಕೊಂಡ ಸುಶೀಲಮ್ಮ ತಮ್ಮ ಮಕ್ಕಳೊಂದಿಗೆ ತಹಶೀಲ್ದಾರ್ ಕಚೇರಿಗೆ ದೂರು ನೀಡಿದ್ದು, “ಸುಶೀಲಮ್ಮ(68) ಎಂಬ ನಾನು ಬದುಕಿದ್ದು, ನನಗೆ ಮಕ್ಕಳಿದ್ದಾರೆ. ಆದರೆ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿ ಮಾಡಿ ಜಮೀನು ಕಬಳಿಸಿದ್ದಾರೆ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿವಾಹೇತರ ಸಂಬಂಧ ಹೊಂದಿರುವ ಪತ್ನಿಯು ಪತಿಯಿಂದ ಜೀವನಾಂಶ ಕೇಳುವಂತಿಲ್ಲ: ಹೈಕೋರ್ಟ್
“ಅಕ್ರಮದ ಹಿಂದೆ ಬ್ರೋಕರ್‌ಗಳು, ಕಚೇರಿಯ ಸಿಬ್ಬಂದಿಗಳ ಕೈವಾಡವಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ವರದಿ : ಹಫೀಜುಲ್ಲ