ಬೈಕ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಹೊರವಲಯದ ಹಳ್ಳದ ಬಳಿ ನಡೆದಿದೆ.
ಮೃತ ದುರ್ದೆವಿ ಬೋಮ್ಮನಾಳ ಗ್ರಾಮದ ನಾಗಪ್ಪ (48) ತಂದೆ ಗಿರಿಯಪ್ಪ ಎನ್ನಲಾಗಿದೆ.ತನ್ನ ಪತ್ನಿಯೊಂದಿಗೆ ಮಾನ್ವಿಗೆ ಬೈಕ್ ನಲ್ಲಿ ತೆರಳುತ್ತಿರುವ ವೇಳೆ ಹಿಂಬದಿ ಬರುತ್ತಿದ್ದ ಲಾರಿಯು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ನಾಗಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪತ್ನಿ ದೇವಮ್ಮಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಮಾನ್ವಿ ತಾಲೂಕ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಾಲ್ಮೀಕಿ ರಾಯಚೂರು ವಿ.ವಿ ಕುಲಸಚಿವರಾಗಿ ಡಾ.ಚನ್ನಪ್ಪ ಎ. ಅಧಿಕಾರ ಸ್ವೀಕಾರ
ಘಟನಾ ಸ್ಥಳಕ್ಕೆ ಮಾನ್ಯ ಪೊಲೀಸ್ ಠಾಣೆಯ ಪಿಐ ಸೋಮಶೇಖರ ಕೆಂಚಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪ್ರಕರಣ ಮಾನ್ವಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
