ಹಿರಿಯ ವಕೀಲರಾದ ಸದಾಶಿವ ರೆಡ್ಡಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಕಠಿಣ ಶಿಕ್ಷೆ ಕ್ರಮ ಜರುಗಿಸಬೇಕು ಎಂದು ರಾಯಚೂರು ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸದಾಶಿವ ರೆಡ್ಡಿಯವರು ಅವರ ಕಛೇರಿಯಲ್ಲಿ ಕೆಲಸ ನಿರ್ವಹಿಸುವಾಗ ಏಕಾಏಕಿ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ.ಪ್ರಕರಣಗಳ ದ್ವೇಷವನ್ನಿಟ್ಟುಕೊಂಡು ವಕೀಲರ ಮೇಲೆ ಕಾನೂನಿನ ಭಯವಿಲ್ಲದೆ ಹಲ್ಲೆ ಕೊಲೆ ಬೆದರಿಕೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ವಕೀಲರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿವೆ.ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲಿಸ್ ಅಧಿಕಾರಿಗಳಿಗೆ ಹಾಗೂ ಇತರೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಈಜಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಯುವಕ ಸಾವು
ರಾಜ್ಯದಲ್ಲಿ ವಕೀಲರ ರಕ್ಷಣೆ ಕಾಯಿದೆಯನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಮತ್ತು ರಾಜ್ಯದ ಎಲ್ಲಾ ವಕೀಲ ಸಮುದಾಯಕ್ಕೆ ಅಗತ್ಯ ರಕ್ಷಣೆಯನ್ನು ಒದಗಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಯಚೂರು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ನಜೀರ್ ಅಹ್ಮದ್ ಶೇರ್ ಅಲಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ, ಖಜಾಂಚಿ ಸೈಯದ್ ನವಾಜ್ ಪಾಷ, ಹಿರಿಯ ವಕೀಲರಾದ ಎಚ್. ಜಗದೀಶ್, ಮುನ್ನಾ ಕುಮಾರ್, ಜಿ.ಎಸ್. ವೀರಭದ್ರಪ್ಪ, ಚಿತ್ರಗಾರ್ ರಾಜಕುಮಾರ್, ಶಿವಕುಮಾರ ಮ್ಯಾಗಳಮನಿ, ಸಂಗಪ್ಪ, ಗಿರೀಶ್ ಮಡಿವಾಳ್, ಓಂಕಾರ ಯಾದವ್ ಸೇರಿದಂತೆ ಅನೇಕರಿದ್ದರು.
