ರಾಯಚೂರು | ಸಮ್ಮೇಳನಗಳು ಕನ್ನಡ ಬಾಂಧವ್ಯ ಗಟ್ಟಿಗೊಳಿಸಲಿ; ನಾಡೋಜ ಗೊ ರು ಚನ್ನಬಸಪ್ಪ

Date:

Advertisements

ಕನ್ನಡಿಗರು ದ್ವೇಷಿಸುವ ಕಲೆಯಿಂದ ಹೊರಬಂದು ಜನರು ಜಾಗೃತರಾಗಬೇಕಾದ ಅವಶ್ಯಕತೆಯಿದ. ಆತ್ಮವಿಮರ್ಶೆ ಮಾಡಿಕೊಂಡು ಕಳೆದು ಹೋಗುತ್ತಿರುವ ಕನ್ನಡದ ಬಾಂಧವ್ಯವನ್ನು ಹುಡಕಿಕೊಳ್ಳಲು ಸಮ್ಮೇಳನಗಳು ಸಹಕಾರಿಯಾಗಲಿ ಎಂದು ನಾಡೋಜ ಗೊ.ರು.ಚನ್ನಬಸಪ್ಪ ಹೇಳಿದರು.

ರಾಯಚೂರು ನಗರದ ರಂಗ ಮಂದಿರದಲ್ಲಿ ಆರನೇ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಸಮ್ಮೇಳನಗಳು ಬರೀ ಜಾತ್ರೆಗಳಲ್ಲ ಅವು ಸಾಂಸ್ಕೃತಿಕ ಜಾತ್ರೆಗಳಾಗಿದ್ದು, ಪರಸ್ಪರ ಸಂಬಂಧ ಬೆಸೆಯುವ ಸಾಹಿತ್ಯ ಜಾತ್ರೆಗಳಾಗಿವೆ. 35 ವರ್ಷಗಳ ನಂತರ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಾಹಿತ್ಯ ಚಟುವಟಿಕೆಗಳು ಸೃಷ್ಟಿಯಾಗುವಂತಾಗಿದೆ. ಬೆಂಗಳೂರಿಗೆ ಸೀಮಿತವಾಗಿದ್ದ ಸಾಹಿತ್ಯ ಪರಿಷತ್ ಇಂದು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೂ ವಿಸ್ತರಿಸಿಕೊಂಡಿರುವುದು ಸಂತಸ ತಂದಿದೆ” ಎಂದರು.

“ಕನ್ನಡಿಗರ ಸಮೈಕ್ಯತೆ, ಸಾಹಿತ್ಯ ಸಂರಕ್ಷಣೆ, ಭಾಷೆಯ ಸಮೃದ್ಧಿಯೇ ಪರಿಷತ್ತಿನ ಮುಖ್ಯ ಧ್ಯೇಯ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಸುಧೀರ್ಘ ಇತಿಹಾಸವಿದೆ. ಸಿವಿಲೈಜ್ ಕಾಲುವಾಗಿದಿದ್ದು ಸಿವಿಲೈಜ್ ಕಾಲುವೆಯಾಗಿ ಮಾರ್ಪಟ್ಟಿರುವದು ದುರುದುಷ್ಟಕರ. ಶತಮಾನೋತ್ಸವ ಸಂಭ್ರಮದಲ್ಲಿದ್ದೇವೆ. ರಾಜಕಾರಣಿಗಳಲ್ಲಿ, ಧರ್ಮಗುರುಗಳಲ್ಲಿಯೂ ಸಾಹಿತಿಗಳಿದ್ದಾರೆ. ಎಲ್ಲರನ್ನು ಒಳಗೊಂಡ ಪರಿಷತ್ ಮುನ್ನಡೆಯಬೇಕಿದೆ” ಎಂದು ತಿಳಿಸಿದರು.

“ವಚನ ಸಾಹಿತ್ಯ ಪರ್ಯಾಯ ಸಂಸ್ಕೃತಿಯನ್ನು ಹುಟ್ಟುಹಾಕಿದೆ. ಸಾಹಿತ್ಯ ಜನ ಸಂಕಷ್ಟಕ್ಕೆ ,ನೋವಿಗೆ ಪರಿಹಾರವಾಗಬೇಕು. ರಾಜ್ಯ ಸರ್ಕಾರ ಪುಸ್ತಕ ಓದುವ ಅಭಿರುಚಿ, ವೈಚಾರಿಕ ಅಭಿಪ್ರಾಯಗಳಿಗೆ ಒಲವು ತೋರಿಸುತ್ತಿರುವದು ಸಮಧಾನಕರ ಬೆಳವಣಿಗೆಯಾಗಿದೆ. ಕನ್ನಡ,ಸಾಹಿತ್ಯ ಒಲವು ಬೆಳೆಸಿಕೊಂಡು ಭಾಷಾ ಪ್ರೇಮವನ್ನು ಮೆರೆಯುವಂತಾಗಬೇಕು” ಎಂದು ಆಶಿಸಿದರು.

ಇದನ್ನೂ ಓದಿ:ರಾಯಚೂರು | ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಇಂದಿನಿಂದ ರೀಗಲ್-25 ವಾರ್ಷಿಕೋತ್ಸವ

Advertisements

ವೇದಿಕೆಯಲ್ಲಿ ಕಿಲ್ಲೆ ಬೃಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯರು, ಸಂಸದ ಜಿ.ಕುಮಾರನಾಯಕ, ಮಹಾನಗರ ಪಾಲಿಕೆ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ, ಸದಸ್ಯ ಜಯಣ್ಣ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಸಾಹಿತಿ ಬಾಬು ಬಂಢಾರಿಗಲ್, ಸಮ್ಮೇಳನಾಧ್ಯಕ್ಷ ಅಯ್ಯಪ್ಪಯ್ಯ ಹುಡಾ, ಸಾಹಿತಿ ಭಗತರಾಜ ನಿಜಾಮಕಾರಿ, ನಾಗರಾಜ ಮಸ್ಕಿ, ತಾಯಪ್ಪ ಹೊಸೂರು, ಜಿ.ಸುರೇಶ, ಬಸವರಾಜ ಸ್ವಾಮಿ, ಚನ್ನಬಸವಣ್ಣ, ಅರವಿಂದ
ಕುಲ್ಕರ್ಣಿ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X