ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾರ್ಮಿಕರಿಗೆ 200 ಮಾನವ ದಿನಗಳು ಹೆಚ್ಚಿಸಬೇಕು ಎಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸುತ್ತಮುತ್ತ ಹಳ್ಳಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಪತ್ರ ಚಳುವಳಿ ನಡೆಸಿದರು.
ಮನರೇಗಾ ನಂಬಿಕೊಂಡು ಬಂದ ಕಡು ಬಡಜನರ ಸಬಲೀಕರಣಕ್ಕೆ ಕೂಲಿ 500 ರೂಪಾಯಿ ಕೂಲಿ ಹೆಚ್ಚಿಸಬೇಕು ಹಾಗೂ ಕೆಲಸದಲ್ಲಿ ಮೃತರಾದರೆ 5 ಲಕ್ಷ ಪರಿಹಾರ ಘೋಷಿಸಬೇಕು ಎಂದು ಗ್ರಾಮೀಣ ಕೂಲಿಕಾರರ ಸಂಘಟನೆಯ ಕಾರ್ಯಕರ್ತರು ಪತ್ರಗಳಿಗೆ ಸಹಿ ಹಾಕುವ ಮೂಲಕ ಮನವಿ ಮಾಡಿದರು.
ಬಡವರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ತುಂಬಾ ಅನುಕೂಲವಾಗಿದೆ. ಆದರೆ ಕೂಲಿ 100 ದಿನಗಳು ಬದಲಾಗಿ 200 ದಿನಗಳಿಗೆ ಹೆಚ್ಚಿಸಬೇಕು. ಕೂಲಿ ಹಣ 349 ರಿಂದ 500 ರೂಪಾಯಿಗಳಿಗೆ ಕೂಲಿ ಹೆಚ್ಚಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಇದನ್ನು ಓದಿದ್ದೀರಾ? ‘ಧೈರ್ಯಶಾಲಿ ರಾಜಕಾರಣಿ’ : ರಾಹುಲ್ ಗಾಂಧಿಯನ್ನು ಹಾಡಿಹೊಗಳಿದ ನಟ ಸೈಫ್ ಅಲಿ ಖಾನ್
ಕಾರ್ಮಿಕರು ಸಹಿ ಮಾಡಿದ ಎಲ್ಲಾ ಪತ್ರಗಳನ್ನು ಅಂಚೆ ಕಚೇರಿಗಳ ಮೂಲಕ ಪ್ರಧಾನಿಗಳಿಗೆ ಕಳುಹಿಸಲಾಯಿತು. ಈ ವೇಳೆ ಮಾನ್ವಿ ತಾಲೂಕು ಸಂಚಾಲಕಿ ಮಾರೆಮ್ಮ ನೀರಮಾನ್ವಿ , ಬಸವರಾಜ್, ಗ್ರಾಕೂಸ್ ಕಾರ್ಯಕರ್ತರು ಸೇರಿದಂತೆ ಹಲವರು ಹಾಜರಿದ್ದರು.
