ರಾಯಚೂರು 167 ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್ ಟವರ್‌ಗೆ ಲಾರಿ ಡಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು, ಭಾರೀ ಅನಾಹುತ ತಪ್ಪಿದೆ.
ರಾಯಚೂರು ತಾಲೂಕಿನ ದುಗನೂರು ಕ್ರಾಸ್ ಬಳಿ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿ ಎನ್‌ಜೆವೈ ಎಫ್1 ಹಾಗೂ ಎಫ್4 ಐಪಿ ಫೀಡರ್‌ಗಳು ಇರುವ ಟವರ್‌ಗೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಲಾರಿಯ ರಭಸಕ್ಕೆ ಟವರ್ ಕೆಳಗಿನ ಭಾಗ ಮುರಿದು ಹೋಗಿದೆ. ಇದೇ ಟವರ್‌ನಿಂದ ವಿದ್ಯುತ್ ಸರಬರಾಜಾಗುತ್ತಿದ್ದ ಸುತ್ತಮುತ್ತಲಿನ 9 ಹಳ್ಳಿಗಳಲ್ಲಿ ವಿದ್ಯುತ್ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ₹1.76 ಕೋಟಿ ಅನಿರ್ಬಂಧಿತ ಅನುದಾನದ ದುರ್ಬಳಕೆ; ತನಿಖೆಗೆ ದಲಿತ ಸೇನೆ ಆಗ್ರಹ
ವಿದ್ಯುತ್ ಕಡಿತಗೊಂಡ ಗ್ರಾಮಗಳಾದ ಕೆರೆಬೂದೂರು, ಹಂಚಿನಾಳ, ದುಗನೂರು, ತುರುಕನಡೋಣಿ, ಮೂಡಲದಿನ್ನಿ, ಬಿಚ್ಚಾಲಿ, ಬಿ.ಯದ್ಲಾಪೂರು, ಚನ್ನವೀರ ನಗರ, ಬಿಚ್ಚಾಲಿ ಕ್ಯಾಂಪ್ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.
ಘಟನಾ ಸ್ಥಳಕ್ಕೆ ಜೆಸ್ಕಾಂ ಇಲಾಖೆ ಸಿಬ್ಬಂಧಿಗಳು ದೌಡಾಯಿಸಿದ್ದು, ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.
