ರಾಯಚೂರು ನಗರದ ನೇತಾಜಿನಗರ ಪೊಲೀಸ್ ಠಾಣೆಯ ಪೊಲೀಸರ ಕಿರುಕುಳದಿಂದ ನನ್ನ ಪತಿ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಸಂತ್ರಸ್ತೆ ನಾಗವೇಣಿ ಆರೋಪಿಸಿ ಈ ಕುರಿತು ನೇತಾಜಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗಾಂಜಾ ಮಾರಾಟದ ವಿಚಾರವಾಗಿ ನೇತಾಜಿನಗರದ ನಿವಾಸಿ ಸುನೀಲ್ ಅವರನ್ನು ನೇತಾಜಿನಗರ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ನನ್ನ ಪತಿ 2024ರ ಡಿಸೆಂಬರ್ 31ರಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು. ಸುಟ್ಟಗಾಯಗಳಿಂದ ನರಳುತ್ತಿದ್ದ ಸುನೀಲ್ ಅವರಿಗೆ ರಾಯಚೂರು ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದು, ಪೊಲೀಸರ ಕಿರುಕುಳದಿಂದಲೆಯೇ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ಪೊಲೀಸರೇ ಕಾರಣ” ಎಂದು ಆರೋಪಿಸಿ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ರಂಗನತಿಟ್ಟು ನಾವಿಕರು; ಕಾಯಮಾತಿಗೆ ಪ್ರಶಾಂತ್ ಮೆತಲ್ ಮನವಿ
ಸಂತ್ರಸ್ತೆ ನೀಡಿದ ದೂರಿನ ಅನ್ವಯ ಕಲಂ 108, ಬಿಎನ್‌ಎಸ್ 2023ರ ಪ್ರಕಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
