ಕೂಲಿ ಹರಸಿ ಮೆಣಸಿನಕಾಯಿ ಕೊಯ್ಲು(ಅರಿಯುವುದು) ಕೆಲಸಕ್ಕೆ ಗುಂಟೂರಿಗೆ ವಲಸೆ ಹೋದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಬಸವರಾಜ್ ನಾಯಕ(50) ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ ಎನ್ನಲಾಗಿದ್ದು, ಇವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಉದ್ಯೋಗವಿಲ್ಲದ ಕಾರಣ ಕೂಲಿ ಕೆಲಸವನ್ನು ಹುಡುಕಿಕೊಂಡು ಆಂಧ್ರದ ಗುಂಟೂರಿಗೆ ಮೆಣಸಿಕಾಯಿ ಕೊಯ್ಯುವುದಕ್ಕೆ ಹೋಗಿದ್ದ ಇವರು ಕಳೆದ ಎರಡು ತಿಂಗಳಿಂದ ಮೆಣಸಿನಕಾಯಿ ಕೊಯ್ಯುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೀದಿ ನಾಯಿಗಳ ದಾಳಿ; ಬಾಲಕಿಗೆ ಗಂಭೀರ ಗಾಯ
ಮೃತ ದುರ್ದೈವಿ ಬಸವರಾಜ ನಾಯಕ ಅವರು ಪತ್ನಿ, ಒಬ್ಬ ಮಗಳು, ಮೂವರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.