ಮೊಹರಂ ಅಂಗವಾಗಿ ನೃತ್ಯ ಮಾಡುವಾಗ ಅಲಾಯಿ ಕುಣಿಯಲ್ಲಿ ಬಿದ್ದು ವ್ಯಕ್ತಿ ತೀವ್ರ ಗಾಯಗೊಂಡ ಘಟನೆ ಲಿಂಗಸೂಗೂರು ತಾಲ್ಲೂಕು ಯರಗುಂಟಿ ಗ್ರಾಮದಲ್ಲಿ ನಡೆದಿದೆ.
ಹನುಮೇಗೌಡ (35) ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೊಹರಂ ಹಬ್ಬದ 9 ನೇ ದಿನದ ಸಡಗರದಲ್ಲಿ ಕುಣಿಯ ಸುತ್ತ ಅಲಾಯಿ ನೃತ್ಯ ಮಾಡುತ್ತಿರುವ ವೇಳೆ ಆಯತಪ್ಪಿ ಕುಣಿಯಲ್ಲಿನ ಬೆಂಕಿಗೆ ಬಿದ್ದಿದ್ದಾನೆ. ತಕ್ಷಣ ಅಲ್ಲಿದ್ದ ಜನರು ಬೆಂಕಿಯಿಂದ ಹೊರಗಡೆ ಎಳೆದಿದ್ದಾರೆ ಎನ್ನಲಾಗಿದೆ.
ಸುಟ್ಟ ಗಾಯಗಳಿಂದ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಂಬೇಡ್ಕರ್ ಪ್ರತಿಮೆಗೆ ಹಾನಿ; ದಲಿತ ಸಂಘಟನೆಗಳ ಆಕ್ರೋಶ
ಲಿಂಗಸೂಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
