ಬಟ್ಟೆ ತೊಳೆಯಲು ಕಾಲುವೆಗೆ ಹೋದಾಗ ಮನೆಗೆ ಹಿಂತಿರುಗದೆ ತಾಯಿ ಮಗಳು ನಾಪತ್ತೆಯಾದ ಘಟನೆ ರಾಯಚೂರು ತಾಲೂಕಿನ ಯದ್ಲಾಪುರ್ ಗ್ರಾಮದಲ್ಲಿ ನಡೆದಿದೆ.
ಬೆಳಿಗ್ಗೆ 6 ಗಂಟೆಗೆ ಬಟ್ಟೆ ತೊಳೆಯಲು ಗ್ರಾಮದ ಹೊರವಲಯದ ಕಾಲುವೆಗೆ ಹೋಗಿದ್ದು, ಮಧ್ಯಾಹ್ನವಾದರೂ ಮನೆಗೆ ಹಿಂತಿರುಗಲಿಲ್ಲ. ಕುಟುಂಬಸ್ಥರು ವೀಕ್ಷಣೆಗೆ ಹೋದಾಗ ಕಾಲುವೆಯಲ್ಲಿ ಕಾಲು ಜಾರಿ ಬಿದ್ದಿರಬಹುದು ಎಂದು ಅನುಮಾನವಾಗಿದೆ.

ತಾಯಿ ಸುಜಾತ (27) , ಮಗಳು ಶ್ರಾವಣಿ (10). ಕಾಲುವೆ ದಡದಲ್ಲಿ ಬಟ್ಟೆ ಇರುವುದನ್ನು ನೋಡಿ ತಾಯಿ ಕಾಲು ಜಾರಿ ಅಥವಾ ಸೋಪು ಕೈಯಿಂದ ಜಾರಿ ನೀರಿನಲ್ಲಿ ಬೀಳುವ ಸಂದರ್ಭದಲ್ಲಿ ತೆಗೆದುಕೊಳ್ಳಲು ಹೋಗಿ ನೀರಿಗೆ ಬಿದ್ದಿರಬಹುದು ಎಂದು ಅನುಮಾನವಾಗಿದೆ. ತಾಯಿಯನ್ನು ಕಾಪಾಡಲು ಮಗಳು ಪ್ರಯತ್ನ ಮಾಡಿ ಬಾಲಕಿಯೂ ಸಹ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿರಬಹುದು ಎಂಬುವುದು ಗ್ರಾಮಸ್ಥರಲ್ಲಿ ಕೇಳಿ ಬರುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕಾಲುವೆಯ ಉದ್ದಕ್ಕೂ ಹುಡುಕುವ ಪ್ರಯತ್ನ ಮಾಡಿದರೂ ಕೂಡ ಯಾವುದೇ ಸುಳಿವು ಸಿಕ್ಕಿಲ್ಲ. ನಂತರ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ ಎನ್ನಲಾಗಿದೆ.
