ರಾಯಚೂರು ಪರಂಪರೆಯ ಜಿಲ್ಲೆಯಾಗಿದ್ದು, ಇಲ್ಲಿ ದಾಸ ಸಾಹಿತ್ಯ, ಗಝಲ್ ಸಾಹಿತ್ಯ, ಪ್ರಾಚೀನ ಇತಿಹಾಸದಿಂದ ಮಧ್ಯಕಾಲೀನ ಇತಿಹಾಸದವರೆಗೆ ನಾನಾ ರೀತಿಯ ಸಾಹಿತ್ಯಗಳು ಹುಟ್ಟಿ ಬೆಳೆದಿವೆ ಎಂದು ನಗರಸಭೆ ಪೌರಾಯುಕ್ತ ಗುರು ಸಿದ್ದಯ್ಯ ಹೇಳಿದರು.
ರಾಯಚೂರಿನ ಐತಿಹಾಸಿಕ ಕೋಟೆ ಅಧ್ಯಯನ ಸಮಿತಿ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ಪ್ರಸ್ತುತ ಸಮಾಜಕ್ಕೆ ಸಾಹಿತ್ಯದ ಮುಖಾಂತರ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ” ಎಂದರು.
ನಗರಸಭೆಯ ಹಿರಿಯ ಸದಸ್ಯ, ಐತಿಹಾಸಿಕ ಕೋಟೆ ಅಧ್ಯಯನ ಸಂಸ್ಥೆಯ ಗೌರವಾಧ್ಯಕ್ಷ ಜಯಣ್ಣ ಮಾತನಾಡಿ, “ಈ ಕಾರ್ಯಕ್ರಮವು ಸುಮಾರು 30 ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಜಿಲ್ಲೆಯ ಸಾಹಿತ್ಯ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ ಜಯಲಕ್ಷ್ಮಿ ಮಂಗಳ ಮೂರ್ತಿ ಮಾತನಾಡಿ, “ಕವಿ ಕಲ್ಪನೆಯ ಸಾಹಿತ್ಯವನ್ನು ಇಂತಹ ಕಾರ್ಯಕ್ರಮಗಳಲ್ಲಿ ಮಾಡುವುದು ಅತ್ಯಂತ ಮಹತ್ವವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತೋಟಗಾರಿಕೆ ಪಿತಾಮಹ ಡಾ. ಎಂ ಎಚ್ ಮರೀಗೌಡ ಪುತ್ಥಳಿ ಅನಾವರಣ
ಈ ವೇಳೆ ಸದಸ್ಯ ದರೂರ್ ಬಸವರಾಜ್, ಉರ್ದು ಹಿರಿಯ ಕವಿ ವಹಿದ್ ವಾಜಿದ್, ವೀರ ಹನುಮಾನ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್, ತಾಲೂಕು ಅಧ್ಯಕ್ಷ ವೆಂಕಟೇಶ್ ಬೇವಿನ ಬೆಂಚಿ, ನಗರಸಭೆಯ ಅಭಿಯಂತರದ ಮಹೇಶ್ ಕುಮಾರ್, ಐತಿಹಾಸಿಕ ಕೋಟೆ ಸಮಿತಿಯ ಅಧ್ಯಕ್ಷ ಕೆ ಸತ್ಯನಾರಾಯಣ, ಕಾರ್ಯದರ್ಶಿಗಳಾದ ಸೈಯದ ಹಫೀಜುಲ್ಲಾ, ಜುನಾಥ್ ಐಲಿ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ