ನಿನ್ನೆ ರಾತ್ರಿ ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ನಗರದ ರೈಲ್ವೇ ಸ್ಟೇಷನ್ ಪೋಸ್ಟ್ ಆಫೀಸ್ ಹತ್ತಿರ ಘಟನೆ ನಡೆದಿದೆ.
ವೀರೇಶ್ (35) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ನಗರದ ಇಂದಿರಾನಗರದ ನಿವಾಸಿ ಎನ್ನಲಾಗಿದೆ. ಘಟನೆಗೆ ಖಚಿತ ಕಾರಣ ತಿಳಿದು ಬಂದಿಲ್ಲ.
ನಗರದ ರೈಲ್ವೆ ಸ್ಟೇಷನ್ ಪೋಸ್ಟ್ ಆಫೀಸ್ ಹತ್ತಿರ ಯುವಕನ ಶವ ಬಿದ್ದರು ಜನ ಮಧ್ಯ ಸೇವಿಸಿ ಬಿದ್ದಿರಬಹುದು ಎಂದು ಹಾಗೆಯೇ ಹೊರಟಿದ್ದರು. ಕೆಲವು ಹೊತ್ತು ಕಳೆದಾಗ ಮೃತದೇಹವನ್ನು ಅಲುಗಾಡಿಸಿದಾಗ ಕೊಲೆಯಾದ ಘಟನೆ ಕಂಡು ಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಳ ಮೀಸಲಾತಿ ಸಮೀಕ್ಷೆ: ತರಬೇತಿ ಕಾರ್ಯಗಾರಕ್ಕೆ ಚಾಲನೆ
ಕಳೆದ ಮೂರು ತಿಂಗಳ ಹಿಂದೆಯೇ ವೀರೇಶ್ ಅವರ ಮದುವೆಯಾಗಿತ್ತು ಎನ್ನಲಾಗಿದೆ.ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
