ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಶ್ರೀ ರಾಮ ಸೇನೆ ಆಯೋಜಿಸಿದ್ದ ಪಥ ಸಂಚಲನದಲ್ಲಿ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಕೋಮುವಾದ, ಪ್ರಚೋದನಕಾರಿ, ಅಸಾಂವಿಧಾನಿಕ ಮತ್ತು ದ್ವೇಷಪೂರಿತ ಭಾಷಣವನ್ನು ಮಾಡಿದ್ದಾರೆ. ಅವನೊಬ್ಬ ಹುಚ್ಚುನಾಯಿ ಎಂದು ಪ್ರಗತಿಪರ ಚಿಂತಕ ಆರ್ ಮಾನಸಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಮುಸ್ಲಿಮರು, ಕ್ರಿಶ್ಚಿಯನ್ನರು, ಕಮ್ಯುನಿಸ್ಟರು ಮತ್ತು ಬಹುಜನ ಭಾರತವನ್ನು ಗುರಿಯಾಗಿಸಿಕೊಂಡು ಅವರು ಯುವಕರಲ್ಲಿ ಹಿಂದೂ ರಾಷ್ಟ್ರ ,ಲವ್ ಜಿಹಾದ್ ಇನ್ನಿತರ ಬಗ್ಗೆ ವಿಷ ಬೀಜ ಬಿತ್ತಿ ಸೌಹಾರ್ದತೆ ನೆಲವನ್ನು ಅಶಾಂತಿ ಸೃಷ್ಟಿಸುವ ಹುನ್ನಾರ ಇದೆ ಎಂದು ದೂರಿದರು.
ಹಿಂದುತ್ವ ಅಜೆಂಡಾ ಸಾವರ್ಕರ್ ಅವರ ಸಿದ್ಧಾಂತದೊಂದಿಗೆ ಸಂಬಂಧ ಹೊಂದಿರುವ ಮುತಾಲಿಕ್ ಅವರ ಸಂಘಟನೆಯು ದಲಿತರಿಗೆ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ವಿರೋಧಿಸುತ್ತದೆ, ಜಾತಿ ವ್ಯವಸ್ಥೆ ಮತ್ತು ವರ್ಣವನ್ನು ಎತ್ತಿಹಿಡಿಯುತ್ತದೆ. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಹು-ಸಾಂಸ್ಕೃತಿಕ, ಬಹು-ಧಾರ್ಮಿಕ ಮತ್ತು ಬಹು-ರಾಷ್ಟ್ರೀಯ ಭಾರತದ ತತ್ವಗಳಿಗೆ ವಿರುದ್ಧವಾಗಿದೆ ಎಂದರು.
ಇದನ್ನು ಓದಿದ್ದೀರಾ? ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ ರಾಜ್ಯದಿಂದ ಮಂತ್ರಿಗಳಾಗಿ ಏನು ಮಾಡುತ್ತಿದ್ದಾರೆ: ಸಿದ್ದರಾಮಯ್ಯ ಪ್ರಶ್ನೆ
ದಲಿತರನ್ನು ಒಬಿಸಿ ಮತ್ತು ಮುಸ್ಲಿಮರಿಂದ ವಿಭಜಿಸುವ ಮತ್ತು ಅಂಬೇಡ್ಕರ್ ಮತ್ತು ಕಮ್ಯುನಿಸ್ಟ್ ಚಿಂತನೆಗಳಿಂದ ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಸಾವರ್ಕರ್ ಅವರ ಫೋಟೋದೊಂದಿಗೆ ಅಂಬೇಡ್ಕರ್ ಅವರ ಫೋಟೋವನ್ನು ವೇದಿಕೆ ಮೇಲೆ ಹಾಕಿದ್ದು ದುರುಪಯೋಗಪಡಿಸಿಕೊಳ್ಳುವುದನ್ನು, ಅಂಬೇಡ್ಕರ್ ಅವರ ಪರಂಪರೆಯನ್ನು, ದಲಿತರ ಅಸ್ಮಿತೆ ನೀಲಿಯನ್ನು ಚಡ್ಡಿಯನ್ನಾಗಿ ಬಳಸಿ ಅವಮಾನಿಸಿದ ಮುತಾಲಿಕ್ ಮತ್ತು ಕಾರ್ಯಕ್ರಮ ಸಂಘಟಕರ ವಿರುದ್ಧ ಹಟ್ಟಿ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.
