ನಾರಾಯಣಪುರ ಬಲದಂಡೆ ಕಾಲುವೆಗೆ ಪ್ರತಿ ವರ್ಷ ಬಸಿನೀರು ಹರಿಯುತ್ತಿತ್ತು ಈ ವರ್ಷ ಏಕಾಏಕಿ ಬಂದ ಮಾಡಿರುವುದರಿಂದ ಕೇಳ ಭಾಗದ ರೈತರಿಗೆ ಹಾಗೂ ಜಾನುವಾರುಗಳಿಗೆ ತುಂಬಾ ಸಮಸ್ಯೆ ಉಂಟಾಗಿದೆ ತಕ್ಷಣ ನೀರು ಹರಿಸಬೇಕು ಎಂದು ಲಿಂಗಸುಗೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
1995 ರಿಂದ ನಾರಾಯಣಪೂರ ಬಲದಂಡೆ ಕಾಲುವೆಗೆ ಬಸಿನೀರು ಬರುತಿತ್ತು.ಈ ಭಾಗದ ಕೆಳ ಭಾಗದ ರೈತರಿಗೆ ಬಸಿನೀರಿಂದ ಹಲವು ರೀತಿಯ ವ್ಯವಸಾಯ ಚಟುವಟಿಕೆಗೆ ಉಪಯೋಗವಾಗುತ್ತಿತ್ತು. ಈ ಬಾರಿ ಏಕಾಏಕಿ ಬಸಿನೀರು ಮಾಡಿದ್ದರಿಂದ ಸಮಸ್ಯೆ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಲಿಂಗಸುಗೂರು ಹೋಬಳಿಯ ರೋಡಲಬಂಡಾ, ಹಿರೇಜಾವೂರು, ಮೇಲಿನಗಡ್ಡಿ, ಜಂಗಿನಗಡ್ಡಿ, ಜಂಗಿರಾಂಪೂರುತಾಂಡ, ಹಾಲಭಾವಿ, ಚಿಕ್ಕ ಉಪ್ಪೇರಿ, ಗೋರೆಬಾಳ ತಾಂಡ, ಕಾಳಾಪೂರು, ಹಳ್ಳಿ, ದೊಡ್ಡಿ, ತಾಂಡಗಳಲ್ಲಿ ಹಾಗೂ ಗುರುಗುಂಟಾ ಹೋಬಳಿಯ ದೇವರಭೂಪರು, ರಾಯದುರ್ಗ, ಟಣಮಕಲ್, ಐದಭಾವಿ, ಗೌಡೂರು, ಚೆಂಚಲದೊಡ್ಡಿ ಹಳ್ಳಿ, ದೊಡ್ಡಿ, ತಾಂಡ ಸೇರಿ ಇನ್ನಿತರ ಸಣ್ಣ ಪುಟ್ಟ ಗ್ರಾಮದಲ್ಲಿ ಇದೆ ನೀರು ಆಸರೆಯಾಗಿತ್ತು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೇ 17,18 ರಂದು ಸಿಂಧನೂರಿನಲ್ಲಿ ಮೇ ಸಾಹಿತ್ಯ ಮೇಳ
ಕಳೆದ ಒಂದು ತಿಂಗಳ ಹಿಂದೆ ಏಕಾಏಕಿ ಕಾಲುವೆ ಬಸಿನೀರು ನಿಲ್ಲಿಸಿದ್ದರಿಂದ ಸಮಸ್ಯೆ ಎದುರಾಗಿದೆ.ಇಲಾಖೆ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ನಾರಾಯಣಪೂರ ಬಲದಂಡೆ ಕಾಲುವೆಗೆ ಬಸಿನೀರು ಬಿಡಬೇಕು. ಒಂದು ವಾರದೊಳಗೆ ಕಾಲುವೆ ಬಸಿನೀರು ಬಿಡದಿದ್ದರೆ, ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ರೈತ ಮುಖಂಡ ಶಿವಪುತ್ರಗೌಡ , ಬಸವರಾಜ್ ಅಂಗಡಿ , ಹನುಮನ ಗೌಡ ,ದುರ್ಗಾಪ್ರಸಾದ , ಭೀಮನಗೌಡ ,ತಿಮ್ಮನಗೌಡ , ರಂಜಾನ್ ಸಾಬ್ ,ಶಂಕ್ರಪ್ಪ ಇನ್ನಿತರರು ಹಾಜರಿದ್ದರು.
