ಉದ್ಯೋಗ ಕೆಲಸ ಮಾಡುವ ವೇಳೆ ಹಾವು ಕಚ್ಚಿ ಗಾಯಗೊಂಡ ಘಟನೆ ಸಿಂಧನೂರು ತಾಲ್ಲೂಕಿನ ಗಾಂಧಿನಗರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಆಂಜನೇಮ್ಮ (40) ಎಂದು ಗುರುತಿಸಲಾಗಿದೆ. ಉದ್ಯೋಗ ಖಾತ್ರಿ ಅಡಿಯಲ್ಲಿ ಗಾಂಧಿನಗರ ಕಾಲುವೆಗಳ ಕಾಮಗಾರಿ ಕೆಲಸ ಮಾಡುವ ವೇಳೆ ಹಾವು ಕಚ್ಚಿದೆ ಎನ್ನಲಾಗಿದೆ. ತಕ್ಷಣ ಸ್ಥಳೀಯರ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಸ್ಥಳೀಯ ದಲಿತ ಸಂಘರ್ಷ ಸಮಿತಿ (ಡಿಜೆ ಸಾಗರ ಬಣ ) ಜಿಲ್ಲಾ ಮುಖಂಡ ಮಂಜುನಾಥ ಗಾಂಧಿನಗರ ಮಾತನಾಡಿ,ನರೇಗಾ ಕೆಲಸ ವೇಳೆ ಸುರಕ್ಷತೆ ಕಿಟ್ ಗಳು ಒದಗಿಸಬೇಕು.ಪಂಚಾಯತ್ ಇಲಾಖೆಯವರು ನಿರ್ಲಕ್ಷತನದಿಂದ ಘಟನೆ ಸಂಭವಸಿದೆ. ಇಂತಹ ಪ್ರಕರಣಗಳು ಹೆಚ್ಚಾದರೂ ಪಂಚಾಯತ್ ಇಲಾಖೆಯವರು ಎಚ್ಚೆತ್ತುಕೊಳ್ಳುತ್ತಿಲ್ಲ. ಹಾವು ಕಚ್ಚಿದ ಮಹಿಳೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಸ್ತೆ ಮಧ್ಯೆ ಕೆಟ್ಟು ನಿಂತ ಬಸ್ ; ವಿದ್ಯಾರ್ಥಿಗಳ ಪರದಾಟ
ಗಾಂಧಿನಗರ ಗ್ರಾಮ ಪಂಚಾಯತ್ ಪಿಡಿಒ ಮಹ್ಮದ ಅನೀಫ್ ಮಾತನಾಡಿ, ಕೆಲಸದ ವೇಳೆ ಆಂಜನೇಮ್ಮ ಅವರಿಗೆ ಹಾವು ಕಚ್ಚಿದೆ. ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸುಧಾರಣೆಯಾಗಿದ್ದಾರೆ ಎಂದು ತಿಳಿಸಿದರು.
