ಗೌತಮ್ ಅದಾನಿ ನಡೆಸುತ್ತಿರುವ ಕಂಪೆನಿಗಳ ಭ್ರಷ್ಟಾಚಾರ ಹಾಗೂ ಅಪರಾಧಿ ಚಟುವಟಿಕೆಗಳ ವಿರುದ್ಧ ಎಫ್‌ಡಿ, ಜೆಎಂಎಂ ಹಾಗೂ ಇತರ ಸಮಾನ ಮನಸ್ಕ ಸಂಘಗಳು ಜಂಟಿಯಾಗಿ ರಾಷ್ಟ್ರೀಯ ಆಂದೋಲನ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಟಿಜನ್ ಫಾರ್ ಡೆಮೊಕ್ರಸಿ ಅಧ್ಯಕ್ಷ ಎಸ್ ಆರ್ ಹಿರೇಮಠ ಹೇಳಿದರು.
ರಾಯಚೂರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ಸಿಟಿಜನ್ ಫಾರ್ ಡೆಮೊಕ್ರಸಿ(ಸಿಎಫ್‌ಡಿ) ಸಂಸ್ಥೆಯ 50ನೇ ವರ್ಷದ ಸಂಭ್ರಮಾಚರಣೆ ಭಾಗವಾಗಿ ಈ ಆಂದೋಲನ ನಡೆಸಲಾಗುತ್ತಿದೆ. ಗೌತಮ್ ಅದಾನಿ ಮತ್ತು ಅವನಿಗೆ ಸಂಬಂಧಿಸಿದ ಕಂಪನಿಗಳೊಂದಿಗೆ ಅಮೇರಿಕಾದಲ್ಲಿ ನಡೆಸಿದ ಭ್ರಷ್ಟಾಚಾರ ಮತ್ತು ಶೇರುಗಳ ಅವ್ಯಹಾರದ ಬಗ್ಗೆ ಅಮೆರಿಕ ಆರೋಪ ಮಾಡಿದೆ” ಎಂದರು.
“ದೇಶಲ್ಲಿಯೂ ಅಧಿಕಾರಿಗಳಿಗೆ ಲಂಚ ನೀಡಿದ ಬಗ್ಗೆ ಹಾಗೂ ಬಂಡವಾಳ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಲಾಗಿದೆಯೆಂದು ಆರೋಪ ಮಾಡಲಾಗಿದೆ. ಹಾಗಾಗಿ ಈ ಎಲ್ಲ ಹಗರಣಗಳನ್ನು ಜನರ ಬಳಿ ಇಡಲು ನಿರ್ಧರಿಸಲಾಗಿದೆ. ದುಷ್ಟ ಬಂಡವಾಳಶಾಹಿ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು” ಎಂದು ಹೇಳಿದರು.
“ಪ್ರಧಾನಮಂತ್ರಿ ಮೋದಿ ಮತ್ತು ಗೌತಮ್ ಅದಾನಿ ನಡುವಿನ ಅಪವಿತ್ರ ಮೈತ್ರಿಯನ್ನು ಸಾರ್ವಜನಿಕರ ಮುಂದಿಡಲು ಆಂದೋಲನ ನಡೆಸಲಾಗುವುದು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು. ಗೌತಮ್ ಅದಾನಿ ಮತ್ತು ಪ್ರಧಾನಿ ಮೋದಿಯವರ ನಡುವಿನ ಅಪವಿತ್ರ ಮೈತ್ರಿಯು ಸಾಮಾನ್ಯ ನಾಗರಿಕರ ಮೇಲೆ ಮತ್ತು ದೇಶದ ಆರ್ಥಿಕತೆ ಮೇಲೆ ಹಾನಿಕಾರಕ ಪರಣಾಮ ಬೀರುತ್ತದೆ. ಸಾಮಾನ್ಯ ಜನರ ಬದುಕನ್ನು ಇದು ಬಿಕ್ಕಟ್ಟಿಗೆ ಒಡ್ಡುತ್ತದೆ. ಆರ್ಥಿಕತೆಯಲ್ಲಿ ಹಣದುಬ್ಬರವನ್ನು ಹೆಚ್ಚಿಸಿ ಜನರ ಬದುಕನ್ನು ಕಡು ಕಷ್ಟಕ್ಕೆ ಈಡು ಮಾಡುತ್ತಿದೆ. ರೈತರ ಆಂದೋಲನವನ್ನು ಸರ್ಕಾರಗಳು ಗೌರವದಿಂದ ಕಾಣಬೇಕು” ಎಂದು ಹೇಳಿದರು.
“ದೆಹಲಿ ಗಡಿಗಳಿಂದ ದೆಹಲಿಯನ್ನು ಪ್ರವೇಶಿಸುವುದಕ್ಕೆ ಅನುಮತಿ ನೀಡಬೇಕು ಹಾಗೂ ಹರಿಯಾಣ ಮತ್ತು ಪಂಜಾಬ್ ಗಡಿಗಳಲ್ಲಿ ಅವರ ಮೇಲೆ ಅಶ್ರುವಾಯು ಮತ್ತು ಇತರೆ ಅಸ್ತ್ರಗಳನ್ನು ಪ್ರಯೋಗಿಸಿ ಹಿಂಸೆ ನೀಡಬಾರದು. ಸಂಸತ್ತಿನಲ್ಲಿ ರೈತ-ವಿರೋಧಿ ಮತ್ತು ಕಾರ್ಪೊರೇಟ್ ಪರವಾದ ಮೂರು ಕರಾಳ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ರೈತರಿಗೆ ನೀಡಿದ ಆಶ್ವಾಸನೆಗಳನ್ನು ಪೂರೈಸಬೇಕು” ಎಂದು ಒತ್ತಾಯಿಸಿದರು.
“2025ರ ಜನವರಿ 18ರಂದು ದೆಹಲಿಯ ಜೆಇಪಿಎಫ್‌ನಲ್ಲಿ ನಡೆಯುವ ಸಿಎಫ್‌ಡಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಆಂದೋಲನದ ಬಗ್ಗೆ ವಿವರವಾಗಿ ಚರ್ಚಿಸಿ ಕಾರ್ಯಯೋಜನೆಯನ್ನು ಸಿದ್ದಪಡಲಾಗುವುದು. ಈ ಆಂದೋಲನಲ್ಲಿ ಆಖಿಲ ಭಾರತ ಮಟ್ಟದ ಸಂಘಟನೆಗಳು ಹಾಗೂ ರಾಜ್ಯ ಮಟ್ಟದ ಸಂಘಟನೆಗಳ ಸಹಕಾರದ ಬಗ್ಗೆಯೂ ಚರ್ಚಿಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಲಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ
ಮನರೇಗಾದಲ್ಲಿ ಕೃಷಿ ಕಾರ್ಮಿಕರಿಗೆ 200 ದಿನಗಳ ಉದ್ಯೋಗ ನೀಡಬೇಕು, ದಿನಗೂಲಿಯನ್ನು ₹600ಕ್ಕೆ ಹೆಚ್ಚಿಸಬೇಕು. ಒಂದು ವೇಳೆ ಪ್ರಸ್ತುತ್ತ ಸರ್ಕಾರವು ತನ್ನೆಲ್ಲ ಕ್ರಮಗಳನ್ನು ಸರಿಪಡಿಸಿಕೊಳ್ಳದಿದ್ದರೆ ಮತ್ತು ರೈತರ ವಿವೇಕಾವಣಿಯನ್ನು ಆಲಿಸದಿದ್ದರೆ ಮೋದಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರ್ಕಾರಕ್ಕೆ 2029ರ ಚುನಾವಣೆಯಲ್ಲಿ ಜನರು ಆರ್‌ಎಸ್‌ಎಸ್ ಬೆಂಬಲದೊಂದಿಗೆ ಅನುಸರಿಸುತ್ತಿರುವ ಪ್ರತಿಗಾಮಿ ಜನವಿರೋಧಿ ಹಾಗೂ ಅಪಾಯಕಾರಿ ವಿಚಾರಗಳನ್ನು ಕೊನೆಗಾಣಿಸುತ್ತಾರೆ. ಏಕೆಂದರೆ ಅಷ್ಟೊತ್ತಿಗೆ ಜನರಿಗೆ ಬಿಜೆಪಿಯ ನಿಜ ಹೂರಣ ಬಹಿರಂಗವಾಗುತ್ತದೆ. ಆದರ ದುಷ್ಟ ಹುನ್ನಾರಗನ್ನು ಜನರು ಅರ್ಥ ಮಾಡಿಕೊಂಡಿರುತ್ತಾರೆ” ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ರವಿಕೃಷ್ಣ ರೆಡ್ಡಿ, ಜಾನ್‌ವೆಸ್ಲಿ, ಖಾಜಾ ಅಹ್ಮದ್ ಅಸ್ಲಂ ಇದ್ದರು.
