ನಗರದ ಅಂಬೇಡ್ಕರ್ ವೃತ್ತದ ಹತ್ತಿರ ಹಾಷ್ಮೀಯಾ ಮಸೀದಿಯ ಆವರಣದಲ್ಲಿ ಅನಧಿಕೃತವಾಗಿ ವಾಸವಿದ್ದ ನಿವಾಸಿಗಳನ್ನು ಹಾಗೂ ವ್ಯಾಪಾರ ಮಳಿಗೆಗಳನ್ನು ಬುಧುವಾರ ಕೋರ್ಟ್ ಆದೇಶದಂತೆ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಮೇ.13 ರಂದು ವಕ್ಫ್ ನ್ಯಾಯಾಲಯದಿಂದ ಕರ್ನಾಟಕ ಸಾರ್ವಜನಿಕ ಆಸ್ತಿ(ಅನಧೀಕೃತ ನಿವಾಸಿಗಳ ತೆರವು) ಅಧಿನಿಯಮ 1974ರ ಸೆಕ್ಷನ್ 5(2) ರನ್ವಯ ಹಾಷ್ಮೀಯಾ ಮಸೀದಿಯ ಆವರಣದಲ್ಲಿ ಅಥವಾ ಆಸ್ತಿಯಲ್ಲಿ ವಾಸವಿರುವ ಅಥವಾ ವ್ಯಾಪಾರ ಮಾಡುತ್ತಿರುವ ಅನಧಿಕೃತ ಮನೆಗಳು ಹಾಗೂ ಅಂಗಡಿಗಳನ್ನು ತೆರವುಗೊಳಿಸಿ ಎಂದು ಆದೇಶ ಹೊರಡಿಸಿದ್ದರು.

ಆದೇಶದನ್ವಯ ಸಹಾಯಕ ಆಯುಕ್ತ ಗಜಾನನ ಬಾಲೆ, ತಹಸೀಲ್ದಾರ್ ಸುರೇಶ ವರ್ಮಾ, ಜಿಲ್ಲಾ ವಕ್ಫ್ ಅಧಿಕಾರಿಗಳು ಹಾಗೂ ವಕ್ಫ ಬೋರ್ಡ ಅಧ್ಯಕ್ಷ ಮೌಲಾನಾ ಪರೀದ್ ಖಾನ್ ನೇತೃತ್ವದಲ್ಲಿ ತೆರೆವು ಪ್ರಕ್ರಿಯೆ ಆರಂಭವಾಗಿ ಅನಧೀಕೃತವಾಗಿ ನಿರ್ಮಿಸಲಾಗಿದ್ದ 31 ಕ್ಕೂ ಹೆಚ್ಚಿನ ಮನೆಗಳಲ್ಲಿ 8 ಮನೆಗಳಲ್ಲಿ ಜನರು ವಾಸವಿದ್ದರು. ಇದಲ್ಲದೇ 25 ಕ್ಕೂ ಹೆಚ್ಚಿನ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
15 ಕ್ಕೂ ಹೆಚ್ಚು ಜೆಸಿಬಿಗಳನ್ನು ತೆರವು ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ತೆರವು ಕಾರ್ಯಾಚರಣೆ ವೇಳೆ ಕೆಲವು ನಿವಾಸಿಗಳು ಹಾಗೂ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿಯೂ ಕೂಡ ನಡೆಯಿತು. ತೆರವುಗೊಳಿಸುವ ಬಗ್ಗೆ ಮೊದಲು ನೋಟಿಸ್ ನೀಡಿಲ್ಲ ಎಂಬುದು ಅಲ್ಲಿನ ನಿವಾಸಿಗಳು ಮತ್ತು ವ್ಯಾಪಾರಸ್ಥರ ವಾದವಾದರೆ, ನೋಟಿಸ್ ನೀಡಲಾಗಿದೆ ಎಂಬುದು ಅಧಿಕಾರಿಗಳ ಪ್ರತಿವಾದವಾಗಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು |ಕೆಸರಲ್ಲಿ ಬಸ್ ಸಿಲುಕಿ ; ಪ್ರಯಾಣಿಕರ ಪರದಾಟ
ಹಿನ್ನಲೆ
1989 ರ ಹಿಂದಿನಿಂದಲೂ ಹಾಷ್ಮೀಯಾ ಮಸೀದಿಗೆ ಸೇರಿದ ಆಸ್ತಿಯಲ್ಲಿ ನಿವಾಸಿಗಳು ವಾಸವಿದ್ದರು. ಅದಾದ ನಂತರ ಹಾಷ್ಮೀಯಾ ಮಸೀದಿಯಿಂದ ಅನಧಿಕೃತ ನಿವಾಸಿಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.ಅಂದಿನ ನ್ಯಾಯಾಧೀಶರು 1989 ರಲ್ಲಿ ತೆರವುಗೊಳಿಸುವ ಆದೇಶವನ್ನು ನೀಡಿತ್ತು. ಇದನ್ನು ವಿರೋಧಿಸಿ ಅನಧಿಕೃತವಾಗಿ ವಾಸವಿದ್ದ ನಿವಾಸಿಗಳಿಂದ ಜಿಲ್ಲಾ ನ್ಯಾಯಾಲಯಕ್ಕೆ ತಡೆಯಾಜ್ಞೆಗಾಗಿ ಅಪೀಲ್ ಮಾಡಲಾಗಿತ್ತು. ಆದರೆ 1992 ರಲ್ಲಿ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆಯನ್ನು ರದ್ದುಗೊಳಿಸಿ ತೆರವುಗೊಳಿಸುವ ಆದೇಶ ಸರಿಯಿದೆ ತೆರವುಗೊಳಿಸಿ ಎಂದು ಮರು ಆದೇಶಿಸಿತು.
ಅದಾದ ನಂತರ 1997 ರಲ್ಲಿ ಜಿಲ್ಲಾ ನ್ಯಾಯಾಲಯದಿಂದ ಹೈಕೋರ್ಟ್ಗೆ ತಡೆಯಾಜ್ಞೆಗಾಗಿ ಮನವಿ ಮಾಡಿದ್ದರು. ಹೈಕೋರ್ಟ್ ಕೂಡ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು. ತೆರವಿಗೆ ಆದೇಶಿಸಿತ್ತು. 1997 ರಲ್ಲಿಯೇ ಮತ್ತೆ ಈ ಪ್ರಕರಣ ದ್ವಿಪೀಠ ಉಚ್ಛನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿಯೂ ಕೂಡ ಈ ಪ್ರಕರಣ ರದ್ದಾಗಿತ್ತು.ತೆರವುಗೊಳಿಸುವ ಬಗ್ಗೆ 2016 ರಲ್ಲಿ ಈ ಪ್ರಕರಣ ವಕ್ಫ್ ನ್ಯಾಯಾಲಯದ ಮುಂದೆ ಇತ್ತು.ಹೀಗೆ ಪ್ರಕರಣ ಮುಂದುವರೆಯುತ್ತಾ ವಕ್ಫ್ ನ್ಯಾಯಾಲಯದಿಂದ ಮೇ 13 ರಂದು ಅನಧಿಕೃತವಾಗಿ ವಾಸವಿದ್ದಾರೆ ಎಂದು ಆದೇಶ ಹೊರಡಿಸಿದರು.

