ನಮ್ಮ ಸರಕಾರವು ಕಲ್ಯಾಣ ಕರ್ನಾಟಕ ಭಾಗಕ್ಕೆ ಸಮಗ್ರ ಅಭಿವೃದ್ದಿಗಾಗಿ ಹೊಸ ಹೊಸ ಯೊಜನೆಗಳು ಜಾರಿಗೆ ತರುವ ನಿಟ್ಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ನಮ್ಮ ಭಾಗದಲ್ಲಿ ಕೌಶಲ್ಯಾಧಾರಿತ ಭವಿಷ್ಯದ ತಂತ್ರಜ್ಞಾನಕ್ಕೆ ಪೂರಕವಾದ ಉದ್ಯೋಗ ಸೃಷ್ಟಿಗಾಗಿ ಈಗಾಗಲೇ ಹಲವು ಯೋಜನೆಗಳ ಮೂಲಕ ಸಾರ್ವಜನಿಕರಿಗೆ ತಲುಪುತ್ತಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.
ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ಯವಾಗಿ ದೀಕ್ಷಣಾ ಗ್ಲೋಬಲ್ ಡೆವೆಲಪ್ಟೆಂಟ್ ಫೌಂಡೇಶನ್ ಕರ್ನಾಟಕ ಡಿಜಿಟಲ್ ಎಕೊನೊಮಿ ಮಿಷನ್ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕದ ಕೌಶಲ್ಯಾಧಾರಿತ ಭವಿಷ್ಯದ ಉದ್ಯೋಗ ಸೃಷ್ಟಿಗಾಗಿ ಮ್ಯಾರಥಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯೂತ್ ಐಕಾನ್ ಬಿಜಾಸ್ಟರ್ ಗ್ರೂಪ್‌ನ ಸಿಇಓ ಶ್ರೀ ಪ್ರಶಾಂತ್ ಬಿಜಾಪೂರ ಮಾತನಾಡಿ, ನಮ್ಮ ಭಾಗದ ಯುವಕರು ಯಾವುದೇ ಕೆಲಸಗಳನ್ನು ಮಾಡುವಾಗ ಸತತ ಪ್ರಯತ್ನ ಮಾಡಬೇಕು. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಮರಳಿ ಯತ್ನವನ್ನು ಮಾಡಬೇಕು. ಹೆಚ್ಚು ಯುವಕರು ನಮ್ಮ ಭಾಗದ ದೇಶದ ಮಟ್ಟದಲ್ಲಿ ಗುರುತಿಸುವ ಹಾಗೆ ಕೆಲಸ ಮಾಡಬೇಕು ಎಂದರು.
ಈ ದೇಶದ ಔದ್ಯೋಗಿಕ ಕ್ಷೇತ್ರದಲ್ಲಿ ತಮ್ಮ ಜ್ಞಾನ, ಕೌಶಲ್ಯಗಳನ್ನು ಸದಾ ಕಲಿಯುತ್ತಾ, ಇನ್ನೊಬ್ಬರಿಗೂ ಸ್ಪೂರ್ತಿಯಾಗುತ್ತಾ ಮುಂದೆ ಸಾಗಬೇಕು. ದೀಕ್ಷಣಾ ಗ್ಲೋಬಲ್ ಡೆವಲಪಮೆಂಟ್ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಈ ಮ್ಯಾರಥಾನ್ ಯುವಕರಲ್ಲಿ ಹೊಸ ಚೈತನ್ಯ ಎಲ್ಲ ತುಂಬಲಿ ಆಶಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಮಾನ್ವಿ ಸಿರವಾರದ ಕೊನೆಯ ಭಾಗಕ್ಕೆ ನೀರು ಹರಿಸಲು ಆಗ್ರಹಿಸಿ ಸೆ.20 ರಸ್ತೆ ತಡೆ: ರೈತರ ಎಚ್ಚರಿಕೆ
ಕಾರ್ಯಕ್ರಮದಲ್ಲಿ ಬಸವರಾಜ ಗಡಗೆ, ಮಂಜುನಾಥ, ಆಕಾಶ ತೊನಸನಳ್ಳಿ, ಬಸವರಡ್ಡಿ, ಮುರುಗೇಶ, ಬಸವೇಶ ಎಂ, ಶಿವಕುಮಾರ ಕೊಡ್ಲಿ, ನಮೃತಾ, ಅಂಕುಶ, ಮಧುತ್ರಿ , ಮಹೇಶ, ಶ್ರೀಶೈಲ್, ಸಂತೋಷ, ಮಂಜುನಾಥ, ಸದಾನಂದ, ನಿರ್ದೇಶಕ ಸುಂದರ, ಪುಂಡಲಿಕ, ಕಾಲೇಜಿನ ವಿದ್ಯಾರ್ಥಿಗಳು, ಯುವಕರು, ಸಾರ್ವಜನಕರು ಹಾಜರಿದ್ದರು. ದೀಕ್ಷಣಾ ಗ್ಲೋಬಲ್ ಡೆವೆಲೆಪಮೆಂಟ್ ಫೌಂಡೇಷನ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನೀಲ್ ಇನ್ನಿತರತರು ಹಾಜರಿದ್ದರು.
