ಮಾನ್ವಿ ತಾಲ್ಲೂಕು ಕಲ್ಮಲಾ ಗ್ರಾಮದ ಹೊರವಲಯದಲ್ಲಿ ಧಾರಾಕಾರ ಮಳೆಗೆ ಸಿಡಿಲು ಬಡಿದು ಮೂರು ಎತ್ತು ಹಾಗೂ ಒಂದು ಹಸು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಕರಿಲಿಂಗಪ್ಪ ,ಸಾಬಣ್ಣ ,ಹಾಗೂ ಶಾಂತಮ್ಮಗೆ ಸೇರಿದ ನಾಲ್ಕು ಜಾನುವಾರುಗಳು ಎಂದು ತಿಳಿದು ಬಂದಿದೆ.
ಗುರುವಾರ ಸಂಜೆ ಕಲ್ಮಲಾ ಗ್ರಾಮದ ಹೊರವಲಯದಲ್ಲಿ ಮರದ ಕೆಳಗೆ ನಿಂತಾಗ ಸಿಡಿಲು ಬಡಿದು ಸಾವನ್ನಪ್ಪಿವೆ ಎಂದು ಹೇಳಲಾಗಿದೆ.ದಿನನಿತ್ಯ ಮೇಯಲು ಹೋದಾಗ ಸಂಜೆ ಮತ್ತೆ ಮನೆಗೆ ಮರಳಿ ಬರುತ್ತವೆ ಎಂದು ಸಂಬಂಧಪಟ್ಟವರು ಗಮನಹರಿಸಿಲ್ಲ.ಇಂದು ಬೆಳಿಗ್ಗೆ ಹುಡುಕಾಟ ನಡೆಸಿದಾಗ ಗ್ರಾಮದ ಹೊರವಲಯದಲ್ಲಿ ಕಂಡು ಬಂದಿವೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಡಿಲು ಬಡಿದು ಇಬ್ಬರು ಮಹಿಳೆಯರು ಗಂಭೀರ ಗಾಯ
ಗ್ರಾಮಸ್ಥರು ನೈಸರ್ಗಿಕ ವಿಕೋಪದಡಿಯಲ್ಲಿ ಸೂಕ್ತ ಪರಿಹಾರ ಒದಗಿಸುವಂತೆ ಕಂದಾಯ ಇಲಾಖೆ ಮತ್ತು ಸರಕಾರಕ್ಕೆ ಒತ್ತಾಯಿಸಿದ್ದಾರೆ.
