ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ 15 ನೇ ಸಾಲಿನ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಬಾರಿ ಅವ್ಯವಹಾರ ಮತ್ತು ಭ್ರಷ್ಟಚಾರ ನಡೆದಿದ್ದು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸಂಘರ್ಷ ಸಮಿತಿ ವತಿಯಿಂದ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿದರು.
ದೇವದುರ್ಗ ವಿಧಾನಸಭಾ ಕ್ಷೇತ್ರದ ಅರಕೇರಾ ತಾಲೂಕಿನ ಜಾಗಿರ ಜಾಡಲದಿನ್ನಿ ಗ್ರಾಮ ಪಂಚಾಯತಿಯಲ್ಲಿ 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಬರುವ ಕಾಮಗಾರಿಗಳನ್ನು ಕಳಪೆಯಾಗಿ ನಿರ್ವಹಿಸಿ ಬೋಗಸ್ ಬಿಲ್ ಸೃಷ್ಟಿಸಿ ಆಕ್ರಮ ಹಣ ಅವ್ಯವಹಾರ ನಡೆಸಿದ ಪಂಚಾಯತಿ ಅಭಿವೃಧಿ ಅಧಿಕಾರಿ ಮುರಳಿ ಮೋಹನ್ ಅವರಿಗೆ ಅಮಾನತುಗೊಳಿಸಬೇಕು ಎಂದು ದೂರಿನಲ್ಲಿ ತಿಳಿಸಿದರು.
ಈ ಸುದ್ಡಿ ಓದಿದ್ದೀರಾ? ರಾಯಚೂರು | ಸಿಡಿಲು ಬಡಿದು ಕುರಿಗಾಯಿ ಸಾವು
ನರೇಗಾ ಯೋಜನೆಯಡಿಯಲ್ಲಿ ಬರುವ ಜಾನುವಾರು ಶೆಡ್ಡುಗಳ ನಿರ್ಮಾಣ, ಬದು ನಿರ್ಮಾಣ, ರಸ್ತೆ, ಶೌಚಾಲಯ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಅಕ್ರಮವಾಗಿ ಬೋಗಸ್ ಬಿಲ್ ಸೃಷ್ಟಿಸಿ ಅವ್ಯವಹಾರ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಕೂಡಲೇ ಪರಿಶೀಲಿಸಿ ತಕ್ಷಣ ತಪ್ಪಿತಸ್ಥರಿಗೆ ಅಮಾನತು ಮಾಡಬೇಕು ಎಂದು ಸಂಘಟನೆಯ ಮುಖಂಡ ಶರಣಪ್ಪ ಬಲ್ಲಟಗಿ ಹೇಳಿದರು.
ಸದರಿ ಕಾಮಗಾರಿಗಳನ್ನು ಕ್ರೀಯಾ ಯೋಜನೆಯಲ್ಲಿಯ, ಯೋಜನಾ ವರದಿ ಅಥವಾ ಅಂದಾಜು ಪತ್ರಿಕೆಯ ಪ್ರಕಾರ ಕಾಮಗಾರಿಗಳನ್ನು ನಿರ್ವಹಿಸದೇ ತಮಗೆ ಮನಸೋ ಇಚ್ಛೆ ತೋರಿದಂತೆ ಮಾಡಿದ್ದಾರೆ. ಇವರ ಬೇಜವಬ್ದಾರಿ ಮತ್ತು ಕರ್ತವ್ಯ ಲೋಪದಿಂದ ಸರಕಾರದ ಹಣ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು.
ದೂರನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತನಿಖೆ ತಂಡ ನೇಮಿಸಿ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಂಡು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು.