ಪಿಡಿಒ ಪ್ರಶ್ನೆಪತ್ರಿಕೆಗಳನ್ನು ಕೊಠಡಿಗೆ ಕೊಡಬೇಕಾದಾಗ ಪ್ರಶ್ನೆಪತ್ರಿಕೆಯ ಕ್ರಮ ಸಂಖ್ಯೆಗಳು ಅದಲು ಬದಲಾಗಿತ್ತು. ಇದನ್ನು ಸರಿಪಡಿಸುವಷ್ಟರಲ್ಲಿ ಒಬ್ಬ ವಿದ್ಯಾರ್ಥಿ ಸೋರಿಕೆಯಾಗಿದೆಯೆಂದು ಅನುಮಾನಪಟ್ಟು ಗೊಂದಲ ಸೃಷ್ಟಿಸಿದ್ದಾರೆ ಎಂದು ಪರೀಕ್ಷಾ ಮುಖ್ಯಸ್ಥ ಬಸವರಾಜ್ ತಡಕಲ್ ಸ್ಪಷ್ಟೀಕರಣ ನೀಡಿದ್ದಾರೆ.
“ಬೆಳಿಗ್ಗೆ 9-30ಕ್ಕೆ ವಿಡಿಯೋ ಕ್ಯಾಮೆರಾ ಸಹಿತ 4 ಪೆಟ್ಟಿಗೆಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷೆ ಕೇಂದ್ರಕ್ಕೆ ತರಲಾಯಿತು. ಅವುಗಳನ್ನು ತೆರೆದಿದ್ದು, ಪರೀಕ್ಷಾ ಕೊಠಡಿಗಳಿಗೆ ಕಳುಹಿಸಲಾಯಿತು. ಯಾವುದೇ ಗೊಂದಲವಿಲ್ಲದೆ ಪ್ರಶ್ನೆಪತ್ರಿಕೆಗಳನ್ನು ಕೊಠಡಿಗೆ ತಲುಪಿಸುವುದರಲ್ಲಿ ಅದಲುಬದಲು ಕಾರಣಕ್ಕೆ ಇದನ್ನು ಸರಿಪಡಿಸುವಷ್ಟರಲ್ಲಿ ಒಬ್ಬ ಅಭ್ಯರ್ಥಿ ಮೊದಲೇ ಪ್ರಶ್ನೆಪತ್ರಿಕೆಗಳನ್ನು ತೆರೆಯಲಾಗಿದೆಯೆಂದು ಆರೋಪ ಮಾಡಿದರು” ಎಂದರು.
“ಸಮಾಧಾನಪಡಿಸಿದರೂ ಅರ್ಥ ಮಾಡಿಕೊಳ್ಳದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆಯೆಂದು ಕೂಗುತ್ತ ಹೊರನಡೆದು ಕೆಲವು ವಿದ್ಯಾರ್ಥಿಗಳು ಹಿಂದೆ ಸೇರಿ ಗೊಂದಲದಿಂದ ಇಷ್ಟೊಂದು ಸಮಸ್ಯೆಯಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ವಸತಿ ಶಾಲೆಗಳಲ್ಲಿ ವಿಶೇಷಚೇತನರಿಗೆ ನೇರಪ್ರವೇಶ ಕಲ್ಪಿಸಿ: ಆಯುಕ್ತ ದಾಸ್ ಸೂರ್ಯವಂಶಿ ಸೂಚನೆ
ಪ್ರತಿಭಟನೆ ಮುಂದುವರೆದಿದೆ: ಪಿಡಿಒ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪ್ರಶ್ನೆಪತ್ರಿಕೆ ವಿತರಣೆ ಎಡವಟ್ಟು ಆರೋಪಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಕಾಲೇಜಿನ ಮುಂಭಾಗ ವಿವಿಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
