ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯಿತಿಗಳ ಅವೈಜ್ಞಾನಿಕ ವಿಶೇಷ ಸಾಮಾಜಿಕ ಲೆಕ್ಕಪರಿಶೋಧನಾ ಮದ್ಯಂತರ ವರದಿಯ ಆಧಾರದ ಮೇಲೆ ಅಮಾನತುಗೊಂಡ ಅಧಿಕಾರಿಗಳ ಆದೇಶ ಹಿಂಪಡೆಯಬೇಕು, ಅಮಾನತುಗೊಂಡ ಅಧಿಕಾರಿಗಳನ್ನು ಮರುನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಪಿಡಿಒಗಳು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.
“ಸಾಮಾಜಿಕ ಲೆಕ್ಕ ಪರಿಶೋದನೆ ಅವೈಜ್ಞಾನಿಕವಾಗಿದೆ. ಇದನ್ನು ಕೂಡಲೇ ರದ್ದು ಮಾಡಬೇಕು. ಗ್ರಾಮ ಪಂಚಾಯಿತಿಗಳ 24 ಮಂದಿ ಮನರೇಗಾ ಹೊರಗುತ್ತಿಗೆ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸಿರುವುದನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
“33 ಗ್ರಾಮ ಪಂಚಾಯಿತಿಗಳ ವಿಶೇಷ ಸಾಮಾಜಿಕ ಲೆಕ್ಕಪರಿಶೋಧನೆಯ ಅಂತಿಮ ವರದಿ ಬರುವವರೆಗೆ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸಬಾರದು, ವಿಶೇಷ ಸಾಮಾಜಿಕ ಲೆಕ್ಕಪರಿಶೋಧನಾ ಅಂತಿಮ ವರದಿ ಬಂದ ಬಳಿಕ ನಿಯಮಾನುಸಾರ ಅಡಾಕ್ ಸಮಿತಿಯಲ್ಲಿ ವರದಿಯ ಅಂಶಗಳನ್ನು ಸರಿಪಡಿಸಲು ಅವಕಾಶ ಮಾಡಿಕೊಡಬೇಕು” ಎಂಬುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಸರ್ಕಾರ ನಡೆಸಲು ಸಿದ್ಧರಾಮಯ್ಯ ಸರ್ಕಾರಕ್ಕೆ ದೇಣಿಗೆ ನೀಡುತ್ತೇವೆ; ರೈತ ಸಂಘ ಕಿಡಿ
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ತಿಮ್ಮಪ್ಪ ನಾಯಕ, ಕಿರಣ್ ಬಾಬು, ಶರಣ ಬಸವ, ಶಂಕರ, ಚನ್ನಬಸವ, ಮಹಮದ್ ಇಸಾಖ್, ದೀಪಕ್, ಅನ್ನಪೂರ್ಣ, ಸರಸ್ವತಿ, ಮಹೇಶ್ವರಿ, ನರಸಪ್ಪ, ಕರಿಯಪ್ಪ ಸೇರಿದಂತೆ ತಾಲೂಕಗಳ ಪಿಡಿಒಗಳು ಇದ್ದರು.
ವರದಿ : ಹಫೀಜುಲ್ಲ